Webdunia - Bharat's app for daily news and videos

Install App

ತಾಕತ್ತಿದ್ರೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಿಲ್ಲಿ: ಚಿದುಗೆ ದಿಗ್ವಿಜಯ್ ಸವಾಲ್

Webdunia
ಸೋಮವಾರ, 24 ನವೆಂಬರ್ 2014 (16:20 IST)
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರು ಬೇಕಾದರೂ ಸ್ಪರ್ಧಿಸ ಬಹುದು ಎನ್ನುವುದರ ಮೂಲಕ ಪ್ರಧಾನ ಕಾರ್ಯದರ್ಶಿ  ದಿಗ್ವಿಜಯ್ ಸಿಂಗ್ ಹಿರಿಯ ನಾಯಕ ಪಿ.ಚಿದಂಬರಂ ಅವರಿಗೆ ಟಾಂಗ್ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಒಳಗೆ ಏರ್ಪಟ್ಟಿರುವ ಕಂದಕ ಆಳವಾಗುತ್ತಿರುವುದು ಮತ್ತು ಅವರೊಳಗೆ ಯಾವುದು ಸರಿಯಾಗಿಲ್ಲ ಎನ್ನುವುದು ಇತ್ತೀಚಿಗೆ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. 

ಗಾಂಧಿ ಮನೆತನದವರಲ್ಲದವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಿರಿ ಎಂದು ಯಾರನ್ನು ಕೂಡ ತಡೆದಿಲ್ಲ ಎಂದು ಸಿಂಗ್ ಹೇಳಿದ್ದಾರೆ.
 
ಚಿದಂಬರಂ ಸೇರಿದಂತೆ ಗಾಂಧಿಯೇತರರಾದ ಯಾರು ಕೂಡ ಪಕ್ಷದ  ಅಧ್ಯಕ್ಷ ಪದವಿಗೆ  ಸ್ಪರ್ಧಿಸಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ.  ಯಾರು ಕೂಡ ಅವರನ್ನು ತಡೆಯಲಾರರು. ಗಾಂಧಿ ಮನೆತನದವರಲ್ಲದ ಯಾರನ್ನು ಕೂಡ ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಿರಿ ಎಂದು ತಡೆದಿಲ್ಲ ಎಂದು ಸಿಂಗ್ ಚಿದಂಬರಂ ಅವರ ಹೇಳಿಕೆಯೊಂದಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
 
ಗಾಂಧಿ ಕುಟುಂಬದ ಸದಸ್ಯರನ್ನು ಹೊರತು ಪಡಿಸಿ ಬೇರೆ ಯಾರು ಕೂಡ ಕಾಂಗ್ರೆಸ್ ಅಧ್ಯಕ್ಷರಾಗಲಾರರು ಎಂದು ಮಾಜಿ ಹಣಕಾಸು ಸಚಿವ ಚಿದಂಬರಂ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. 
 
ಟೀಕಿಸಲು ಸಿಕ್ಕ ಅವಕಾಶವನ್ನು ಬಿಡಲು ತಯಾರಿಲ್ಲದ ಭಾರತೀಯ ಜನತಾ ಪಕ್ಷ, ರಾಹುಲ್ ಗಾಂಧಿ ನಾಯಕತ್ವದ ಪರಿಣಾಮಕಾರಿತ್ವದ ಬಗ್ಗೆ  ಕಾಂಗ್ರೆಸ್ ನಾಯಕರಿಗೆ ಸಂಶಯಗಳು ಮೂಡಿವೆಯೇ ಎಂದು ಪ್ರಶ್ನೆ ಹಾಕಿದೆ.
 
 "ಕಾಂಗ್ರೆಸ್ ಒಳಗೆ ಕದನ ಭುಗಿಲೆದ್ದಿದೆ ಎಂಬುದು ನನಗೆ ಭಾಸವಾಗುತ್ತಿದೆ.ಕೈ ಪಕ್ಷದ ನಾಯಕರು ತಮ್ಮ ತಮ್ಮೊಳಗೆ ಕಾಲೆಳೆಯುವುದರಲ್ಲಿ ನಿರತರಾಗಿದ್ದಾರೆ. ಈ ಮೂಲಕ  ಕಾಂಗ್ರೆಸ್ ಮುಕ್ತ ಭಾರತದ ಧ್ಯೇಯ ಹೊಂದಿರುವ ನಮಗೆ ಅದನ್ನು ಸಾಧಿಸಲು ಸ್ವತಃ ಆ ಪಕ್ಷವೇ ಸಹಾಯ ಮಾಡುತ್ತಿದೆ, " ಎಂದು ಬಿಜೆಪಿ ನಾಯಕ GVL ನರಸಿಂಹ ರಾವ್ ಹೇಳಿದ್ದಾರೆ. 
 
ಈ ಮೊದಲು ಚಿದಂಬರಂ ಪುತ್ರ ಕಾರ್ತೀ ಪಿ ಚಿದಂಬರಂ ಕೂಡ ಹೈ ಕಮಾಂಡ್ ಕಾರ್ಯ ವಾಖರಿಯ ಬಗ್ಗೆ  ಅಸಮಾಧಾನ ವ್ಯಕ್ತ ಪಡಿಸಿದ್ದರು.  
 
"ಹೈಕಮಾಂಡ್, ಕಾರ್ಯ ನಿರ್ವಹಣೆ ಮತ್ತು ಆಡಳಿತದ ವೀಕ್ಷಕ ಶೈಲಿಯಲ್ಲಿ  ಬದಲಾವಣೆ ತರುವ ಅಗತ್ಯವಿದೆ. ರಾಜ್ಯ ಘಟಕಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು. ರಾಜ್ಯ ಘಟಕಗಳು ಪರಿಣಾತ್ಮಕವಾಗಿ ಕೆಲಸ ಮಾಡಬೇಕು ಮತ್ತು ಬಲುಬೇಗನೆ ಪ್ರತಿಕ್ರಿಯಿಸುವಂತಾಗಬೇಕು. ಕೇರಳದಲ್ಲಿರುವ ಕಾಂಗ್ರೆಸ್ ಘಟಕದ ಮಾದರಿಯ ಘಟಕಗಳು ಇತರ ರಾಜ್ಯಗಳಲ್ಲಿಯೂ ಇರಬೇಕೆಂದು ನಾನು ಬಯಸುತ್ತೇನೆ. ಕೇರಳ ಘಟಕದಲ್ಲಿ ದೆಹಲಿಯಿಂದ ಹೆಚ್ಚು ಹಸ್ತಕ್ಷೇಪ ನಡೆಯುವುದಿಲ್ಲ. ಅದು ಸ್ವತಂತ್ರ ಮತ್ತು, ಪ್ರಬಲ ಘಟಕ" ಎಂದು ಕಾರ್ತೀ ಹೇಳಿಕೆ ನೀಡಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments