Webdunia - Bharat's app for daily news and videos

Install App

1978ರಲ್ಲಿ ಡಿಗ್ರಿ ಪಡೆದದ್ದು ಬೇರೆ ನರೇಂದ್ರ ಮೋದಿ, ಪ್ರಧಾನಿಯಲ್ಲ: ಎಎಪಿ ಆರೋಪ

Webdunia
ಶುಕ್ರವಾರ, 6 ಮೇ 2016 (18:38 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿ ವಿವಿಯಿಂದ ಪದವಿ ಪಡೆದಿರುವ ವಿಷಯ ಈಗ ವಿವಾದದ ಸ್ವರೂಪಕ್ಕೆ ತಿರುಗಿದ್ದು, ಪ್ರಧಾನಿ ಸುಳ್ಳು ಹೇಳಿದ್ದಾರೆಂದು ಸಾಬೀತು ಮಾಡಲು ತಮ್ಮ ಬಳಿ ಹೊಸ ದಾಖಲೆಗಳಿವೆ ಎಂದು ಆಮ್ ಆದ್ಮಿ ಪಕ್ಷ ಪ್ರತಿಪಾದಿಸಿದೆ. ಇತ್ತೀಚೆಗೆ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ಡಿಗ್ರಿ ನಕಲಿಯಾಗಿದೆ ಎಂದೂ ಅದು ತಿಳಿಸಿದೆ. 
 
 ಅರವಿಂದ ಕೇಜ್ರಿವಾಲ್ ನಿನ್ನೆ ದೆಹಲಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು, ಪ್ರಧಾನಿ ಮೋದಿ ಡಿಗ್ರಿಯ ವಿವರಗಳನ್ನು ಅದರ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆಯೂ ಮತ್ತು ಡಿಗ್ರಿ ದಾಖಲೆಗಳು ಸುರಕ್ಷಿತವಾಗಿರುವಂತೆ ಖಾತ್ರಿ ಮಾಡುವಂತೆಯೂ ತಿಳಿಸಿದ್ದರು. 
 
ಇಂತಹ ದಾಖಲೆಗಳು ಅಸ್ತಿತ್ವದಲ್ಲೇ ಇಲ್ಲ. ನರೇಂದ್ರ ದಾಮೋದರ್ ಮೋದಿ 1978ರಲ್ಲಿ ವಿವಿಯ ಪದವಿ ಪಡೆದಿಲ್ಲ ಎಂದು ಎಎಪಿ ಆರೋಪಿಸಿದೆ. ಅವರ ಡಿಗ್ರಿ ನಕಲಿಯಾಗಿದ್ದು, ಅವರು ಪರೀಕ್ಷೆಯನ್ನು ತೆಗೆದುಕೊಂಡೇ ಇಲ್ಲ ಎಂದು ಎಎಪಿಯ ಅಶುತೋಷ್ ಆರೋಪಿಸಿದರು.
 
ಪ್ರಧಾನಿ ಮೋದಿ ಪದವಿ ಪಡೆದ ದಿನಾಂಕದಲ್ಲೇ ಉತ್ತೀರ್ಣರಾಗಿರುವ ನರೇಂದ್ರ ಮಹಾವೀರ್ ಮೋದಿ ಎಂಬವರ ಡಿಗ್ರಿ ಪ್ರಮಾಣಪತ್ರವನ್ನು ತಾನು ಪತ್ತೆಹಚ್ಚಿರುವುದಾಗಿ ಎಎಪಿ ತಿಳಿಸಿದೆ. ನರೇಂದ್ರ ಮಹಾವೀರ್ ಮೋದಿ ರಾಜಸ್ಥಾನದ ಆಳ್ವಾರ್‌ಗೆ ಸೇರಿದ್ದು, ಪ್ರಧಾನಿ ಮೋದಿ ಗುಜರಾತಿನ ವಡಾನಗರದವರು ಎಂದು ಅವರ ಶಾಲೆಯ ಪ್ರಮಾಣ ಪತ್ರ ಉಲ್ಲೇಖಿಸಿ ಎಎಪಿ ತಿಳಿಸಿದೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಜ್ಞಾತ ವಾಸದಿಂದ ಹೊರಬಂದ ಇರಾನ್‌ನ ಸರ್ವೋಚ್ಚ ನಾಯಕ: ಜನರತ್ತ ಕೈಬೀಸಿದ ಅಯಾತೊಲ್ಲಾ ಅಲಿ

ಟೆಕ್ಸಾಸ್‌ನಲ್ಲಿ ಹಠಾತ್ ಪ್ರವಾಹದಿಂದ 50 ಮಂದಿ ಸಾವು: 850 ಮಂದಿಯ ರಕ್ಷಣೆ, 27 ವಿದ್ಯಾರ್ಥಿನಿಯರು ನಾಪತ್ತೆ

Karnataka Weather: ಕರಾವಳಿಯಲ್ಲಿ ಆರೆಂಜ್ ಅಲರ್ಟ್​ ಘೋಷಣೆ, ಒಂದು ವಾರ ಧಾರಾಕಾರ ಮಳೆ ಸಾಧ್ಯತೆ

ಡೋನಾಲ್ಡ್‌ ಟ್ರಂಪ್‌ ಜೊತೆ ಮುನಿಸಿಕೊಂಡ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಘೋಷಿಸಿದ ಇಲಾನ್ ಮಸ್ಕ್

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮುಂದಿನ ಸುದ್ದಿ
Show comments