Select Your Language

Notifications

webdunia
webdunia
webdunia
webdunia

ಕಚ್ಚಾ ತೈಲದಲ್ಲಿ ಏರು ಪೇರು: ಇಂಧನದಲ್ಲಿ 70 ಪೈಸೆ ಇಳಿಕೆ ಸಾಧ್ಯತೆ

ಕಚ್ಚಾ ತೈಲದಲ್ಲಿ ಏರು ಪೇರು: ಇಂಧನದಲ್ಲಿ 70 ಪೈಸೆ ಇಳಿಕೆ ಸಾಧ್ಯತೆ
ನವದೆಹಲಿ , ಶುಕ್ರವಾರ, 30 ಜನವರಿ 2015 (09:09 IST)
ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಕೂಡ ಇದೇ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 50ರಿಂದ 70 ಪೈಸೆಗೆ ಇಳಿಕೆಯಾಗುವ ಸಾಧ್ಯತೆ ಇದೆ. 
 
ಫೆಬ್ರವರಿಯಲ್ಲೂ ಇದೇ ಪರಿಸ್ಥಿತಿ ಮುಂದುವರಿದರೆ ಕೇಂದ್ರ ಸರ್ಕಾರ ಕೂಡ ಬಜೆಟ್‌ನಲ್ಲಿ ತೈಲೋತ್ಪನ್ನಗಳ ದರ ಇಳಿಕೆ ಬಗ್ಗೆ ಕ್ರಮಗಳನ್ನು ಘೋಷಿಸಲಿದೆ ಎನ್ನಲಾಗುತ್ತಿದ್ದು, ಅಮೆರಿಕಾ ಮಾರಕಟ್ಟೆಯಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲದ ಬೆಲೆ ಬ್ಯಾರೆಲ್‌‌ವೊಂದಕ್ಕೆ 44.21 ಡಾಲರ್‌ಗೆ ಇಳಿದಿದೆ. 

Share this Story:

Follow Webdunia kannada