Select Your Language

Notifications

webdunia
webdunia
webdunia
webdunia

ಎಎಪಿಯಲ್ಲಿ ಭಿನ್ನಮತ ಸ್ಫೋಟ: ಬೇಸರ ವ್ಯಕ್ತಪಡಿಸಿದ ಕೇಜ್ರಿ

ಎಎಪಿಯಲ್ಲಿ ಭಿನ್ನಮತ ಸ್ಫೋಟ: ಬೇಸರ ವ್ಯಕ್ತಪಡಿಸಿದ ಕೇಜ್ರಿ
ನವದಹೆಲಿ , ಮಂಗಳವಾರ, 3 ಮಾರ್ಚ್ 2015 (12:42 IST)
ದೆಹಲಿ ವಿಧಾನಸಭೆಯಲ್ಲಿ ಅಭೂತಪೂರ್ವ ಜಯ ಗಳಿಸಿ ಇತಿಹಾಸ ಸೃಷ್ಟಿಸಿದ್ದ ಎಎಪಿ ಪಕ್ಷದಲ್ಲಿ ಪ್ರಸ್ತುತ ಒಳ ಬೇಗೆ ಕಾಣಿಸಿಕೊಂಡಿದ್ದು, ಪಕ್ಷದ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ನನಗೆ ಇಂತಹ ಇತ್ತೀಚಿನ ವಿಷಯಗಳಿಂದ ವೈಯಕ್ತಿಕವಾಗಿ ತುಂಬಾ ನೋವಾಗಿದೆ. ಅಲ್ಲದೆ ಇದು ದೆಹಲಿ ಜನರಿಗೆ ಎಸಗುತ್ತಿರುವ ದ್ರೋಹ ಎಂದು ಟ್ವೀಟ್ ಮಾಡಿದ್ದಾರೆ. 
 
ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಪಕ್ಷದಲ್ಲಿ ಭಿನ್ನಮತ ಇರುವ ಬಗ್ಗೆ ಕೆಲವರ ನಡವಳಿಕೆಗಳಿಂದ ಇತ್ತೀಚೆಗಷ್ಟೇ ಸಾಬೀತಾಗುತ್ತಿದೆ. ಇದರಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ. ಅಲ್ಲದೆ ಇದು ದೆಹಲಿ ಜನತೆಗೆ ಮಾಡುತ್ತಿರುವ ದ್ರೋಹ ಎಂದಿರುವ ಅವರು, ಈ ಕೆಸರೆರಚಾಟದಲ್ಲಿ ನಾನು ಭಾಗಿಯಾಗುವುದಿಲ್ಲ. ದೆಹಲಿ ಅಭಿವೃದ್ಧಿಯತ್ತ ಗಮನ ಹರಿಸುವೆ ಎಂದು ಟ್ವೀಟ್ ಮಾಡಿದ್ದಾರೆ. 
 
ಇನ್ನು ಪಕ್ಷದ ಹಿರಿಯ ಸದಸ್ಯ ಯೋಗೇಂದ್ರ ಯಾದವ್ ಅವರು ಕೇಜ್ರಿವಾಲ್ ಅವರನ್ನು ಈ ಹಿಂದೆ ಸುಪ್ರೀಂ ಕಮ್ಯಾಂಡೊ ಎಂದಿದ್ದರು. ಅಲ್ಲದೆ ಪಕ್ಷದಲ್ಲಿ ಏಕಮುಖ ವ್ಯಕ್ತಿಯ ದರ್ಬಾರು ಕಾಣಿಸುತ್ತಿದ್ದು, ಪಕ್ಷದ ಮೂಲ ಸಿದ್ಧಾಂತಗಳಿಗೆ ಮೌಲ್ಯ ಒದಗಿಸದೆ ಸರ್ವಾಧಿಕಾರಿ ಆಡಳಿತವನ್ನು ನಡೆಸಲಾಗುತ್ತಿದೆ ಎಂದು ಕೇಜ್ರಿ ಅವರನ್ನು ಪರೋಕ್ಷವಾಗಿ ದೂರಿದ್ದರು. ಈ ಹೇಳಿಕೆಗೆ ಪಕ್ಷದ ಮತ್ತೋರ್ವ ಸದಸ್ಯ ಪ್ರಶಾಂತ್ ಭೂಷಣ್ ಕೂಡ ಧ್ವನಿಗೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಂದು ಬಣದಲ್ಲಿದ್ದರೆ, ಯಾದವ್ ಹಾಗೂ ಭೂಷಣ್ ತಮ್ಮದೇ ಹೇಳಿಕೆಗಳನ್ನು ನೀಡುತ್ತಾ ಎಎಪಿ ವಿರುದ್ಧ ಸಮರ ಸಾರುತ್ತಿದ್ದಾರೆ. 
 
ಈ ಇಬ್ಬರೂ ಕೂಡ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ದೂರಿದ್ದು, ಕೇಜ್ರಿವಾಲ್ ಸಿಎಂ ಪಟ್ಟದಲ್ಲಿದ್ದರೂ ಕೂಡ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಮುಂದುವರಿಯುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿದ್ದು, ಈ ಇಬ್ಬರೂ ಸದಸ್ಯರ ವಿರುದ್ಧ ನಿರ್ಣಯ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. 
 
ಈ ಪ್ರಕರಣ ಸಂಬಂಧ ನಿನ್ನೆ ಪ್ರತಿಕ್ರಿಯಿಸಿದ್ದ ಪಕ್ಷದ ಮತ್ತೋರ್ವ ಸದಸ್ಯ ಅಶುತೋಷ್, ನಮ್ಮ ಪಕ್ಷದಲ್ಲಿ ವ್ಯಕ್ತಿಗಳ ಸಮರ ನಡೆಯುವುದಿಲ್ಲ. ಕೇವಲ ಐಡಿಯಾಗಳ ಸಮರಗಳಷ್ಟೇ ನಡೆಯುತ್ತವೆ ಎಂದಿದ್ದರು. 

Share this Story:

Follow Webdunia kannada