Select Your Language

Notifications

webdunia
webdunia
webdunia
webdunia

ಕೇಂದ್ರ ಸರಕಾರದಿಂದ ಡಿಸೇಲ್ ದರ ಇಳಿಕೆ ಸಾಧ್ಯತೆ

ಕೇಂದ್ರ ಸರಕಾರದಿಂದ ಡಿಸೇಲ್ ದರ ಇಳಿಕೆ ಸಾಧ್ಯತೆ
ಚಂಡೀಗಢ , ಸೋಮವಾರ, 1 ಸೆಪ್ಟಂಬರ್ 2014 (20:01 IST)
ಸರಕಾರ ಪೆಟ್ರೋಲು ಬೆಲೆಯನ್ನು ಮಾತ್ರ ಇಳಿಸುತ್ತಿದೆ. ಡಿಸೇಲ್‌ ಬೆಲೆ ಏರುತ್ತಿದೆ ಎಂಬ ಚಿಂತೆಯಲ್ಲಿದ್ದೀರಾ? ಇಲ್ಲಿದೆ ಸಿಹಿ ಸುದ್ದಿ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ವಚನದಂತೆ ಸರಕಾರ ಡಿಸೇಲ್‌ ಬೆಲೆ ಕಡಿತಗೊಳಿಸುವ ಪ್ರಯತ್ನದಲ್ಲಿದೆ.
 
ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಸರಕಾರ ವಚನಬದ್ಧವಾಗಿದೆ. ಪೆಟ್ರೋಲಿನಂತೆ ಡಿಸೇಲ್‌ ಬೆಲೆಯೂ ಇಳಿಯಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.
 
ಪೆಟ್ರೋಲ್ ಬೆಲೆ 2.50 ರೂ. ಕಡಿತಗೊಳಿಸಿದಂತೆ ಡಿಸೇಲ್‌ ಬೆಲೆಯನ್ನೂ ಸಾಧ್ಯವಾದಷ್ಟು ಕಡಿತಗೊಳಿಸಲಿದ್ದೇವೆ. ನಾವು ವಚನ ಭ್ರಷ್ಟರಾಗುವುದಿಲ್ಲ ಎಂದು ಹರ್ಯಾಣದ ಪಲ್ವಾಲ್‌ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.

Share this Story:

Follow Webdunia kannada