Select Your Language

Notifications

webdunia
webdunia
webdunia
webdunia

ದೇಶದಲ್ಲೇ ಪ್ರಪ್ರಥಮ: ಬೆಂಗಳೂರಲ್ಲಿ ಡೀಸೆಲ್ ಹೋಮ್ ಡೆಲಿವರಿ ಶುರು

ದೇಶದಲ್ಲೇ ಪ್ರಪ್ರಥಮ: ಬೆಂಗಳೂರಲ್ಲಿ ಡೀಸೆಲ್ ಹೋಮ್ ಡೆಲಿವರಿ ಶುರು
ಬೆಂಗಳೂರು , ಗುರುವಾರ, 22 ಜೂನ್ 2017 (15:21 IST)
ಹಾಲು, ನ್ಯೂಸ್ ಪೇಪರ್, ದಿನಸಿ ರೀತಿಯೇ ಡೀಸೆಲ್ ಕೂಡ ಹೋಮ್ ಡೆಲಿವರಿಯಾಗುತ್ತಿದೆ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಡೀಸೆಲ್ ಹೋಮ್ ಡೆಲಿವರಿ ಆರಂಭವಾಗಿದೆ.

ಈ ರೀತಿಯ ಚಿಂತನೆ ಇದೆ ಎಂದು ಪೆಟ್ರೋಲಿಯಂ ಸಚಿವಾಲಯ ಘೋಷಿಸಿದ ಬೆನ್ನಲ್ಲೇ ಮೈಪೆಟ್ರೋಲ್ ಪಂಪ್’ ಎಂಬ ಒಂದು ವರ್ಷ ಪ್ರಾಯದ ನೂತನ ಕಂಪನಿಯೊಂದು ಇಂಥದ್ದೊಂದು ಸಾಹಸಕ್ಕೆ ಕೈಹಾಕಿದೆ. ತಲಾ 950 ಲೀಟರ್ ಡೀಸೆಲ್ ಸರಬರಾಜು ಮಾಡಬಲ್ಲ 3 ವಾಹನಗಳು ಡೀಸೆಲ್ ಹೋಮ್ ಡೆಲಿವರಿಯಲ್ಲಿ ತೊಡಗಿವೆ.

ಅದಾಗಲೇ 5000 ಲೀಟರ್`ನಷ್ಟು ಡೀಸೆಲ್ ಹೋಮ್ ಡೆಲಿವರಿ ಮಾಡಿರುವ ಸಂಸ್ಥೆ ಹೋಮ್ ಡೆಲಿವರಿ ನಿರ್ದಿಷ್ಟ ಚಾರ್ಜ್ ಮಾಡುತ್ತಿದೆ. 100 ಲೀಟರ್ ಡೀಸೆಲ್ ಮೊದಲ ಡೆಲಿವರಿಗೆ 99 ರೂ. ಡೆಲಿವರಿ ಚಾರ್ಜ್ ಮಾಡಲಾಗುತ್ತಿದೆ. 16 ಶಾಲೆಗಳು, ಅಪಾರ್ಟ್ ಮೆಂಟ್ ಮುಂತಾದ ಕಡೆಗಳಿಂದ ಆರ್ಡರ್ ಬರುತ್ತಿವೆ. ಫೋನ್ ಅಥವಾ ಉಚಿತ ಆಪ್ ಡೌನ್ ಲೋಡ್ ಮಾಡಿಕೊಂಡು ಸಹ ಆರ್ಡರ್ ಮಾಡಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 23ರಂದು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ನಾಮಪತ್ರ ಸಲ್ಲಿಕೆ