Webdunia - Bharat's app for daily news and videos

Install App

ಅತ್ತೆ 20 ಜನ ಮಹಿಳೆಯರ ಜೊತೆ ಸೇರಿ ಸೊಸೆಗೆ ಮಾಡಿದ್ದೇನು ಗೊತ್ತಾ?

Webdunia
ಸೋಮವಾರ, 17 ಡಿಸೆಂಬರ್ 2018 (07:02 IST)
ನವದೆಹಲಿ : ಒಂದು ಮನೆಯಲ್ಲಿ ಅತ್ತೆ ಸೊಸೆಯ ಜಗಳ ಸರ್ವೆ ಸಾಮಾನ್ಯ. ಆದರೆ ಅತ್ತೆಯೊಬ್ಬಳು 20 ಜನ ಮಹಿಳೆಯರ ಜೊತೆ ಸೇರಿ ಸೊಸೆಗೆ ಲೈಂಗಿಕ ಕಿರುಕುಳ ಕೊಟ್ಟ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.


ಡಿಸೆಂಬರ್ 10ರಂದು ಸಂತ್ರಸ್ತ ಮಹಿಳೆ ಹಾಗೂ ತನ್ನ ತಾಯಿಯ ಜೊತೆ ಗಂಡನ ಮನೆಗೆ ಬಂದಾಗ ಆಕೆಯ ಅತ್ತೆ ಬಾರ್ ನಲ್ಲಿ ಕೆಲಸ ಮಾಡುವ 20 ಜನ ಮಹಿಳೆಯರು ಸೇರಿದಂತೆ 30 ಜನ ಗೂಂಡಾಗಳು ಹೊರಬಂದು ಏಕಾಏಕಿ ತಾಯಿ-ಮಗಳ ಮೇಲೆ ಹಲ್ಲೆ ಮಾಡಿದ್ದಾರೆ.


ಅಷ್ಟೇ ಅಲ್ಲದೇ ಅತ್ತೆ ಹಾಗೂ ಕೆಲ ಮಹಿಳೆಯರು ಸಂತ್ರಸ್ತೆಯನ್ನು ಒಳಗೆ ಎಳೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಪತಿ  ಕೂಡ ಭಾಗಿಯಾಗಿದ್ದನು. ಆದರೆ ಆತ ಪತ್ನಿಯ ಮೇಲೆ ಹಲ್ಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ.


ಈ ಘಟನೆ ಸಂಬಂಧ ಡಿಸೆಂಬರ್ 14ರಂದು ಸಂತ್ರಸ್ತ ಮಹಿಳೆ ಹಾಗೂ ತಾಯಿ ಆರೋಪಿಗಳ ವಿರುದ್ಧ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ