ಕಪ್ಪು ಹಣ ನಿರ್ಮೂಲನೆ, ಭ್ರಷ್ಟಾಚಾರ ನಿಯಂತ್ರಣ ಕುರಿತಂತೆ ನೋಟು ನಿಷೇಧ ಕೇವಲ ಆರಂಭ ಮಾತ್ರ. ಮುಂದೆ ಕಾದಿದೆ ಮಾರಿಹಬ್ಬ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಕಪ್ಪು ಹಣ, ಭ್ರಷ್ಟಾಚಾರ ಮತ್ತು ನಕಲಿ ನೋಟಿನ ಹಾವಳಿಯಿಂದಾಗಿ ದೇಶದ ಬಡವರು, ಮಧ್ಯಮ ವರ್ಗದವರು ತುಂಬಾ ಸಂಕಷ್ಟ ಅನುಭವಿಸಿದ್ದರು. ಇಂತಹ ಕೆಟ್ಟ ಹಾವಳಿಯನ್ನು ತಡೆಗಟ್ಟಿ ದೇಶವನ್ನು ಬಲಾಢ್ಯ ಆರ್ಥಿಕ ಶಕ್ತಿಯಾಗಿಸುವುದೇ ನಮ್ಮ ಸರಕಾರದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ನೋಟು ನಿಷೇಧ ಕುರಿತಂತೆ ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿರುವಾಗಲೇ ಬಿಜೆಪಿ ಸಂಸದೀಯ ಸಮಿತಿ, ಮೋದಿಯವರ ಕಾರ್ಯಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.
ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ವಿಪಕ್ಷಗಳು ದೇಶದ ಜನತೆ ಮತ್ತು ಸರಕಾರದೊಂದಿಗೆ ಇರಲು ಬಯಸುತ್ತವೆಯೋ ಅಥವಾ ಕಾಳಸಂತೆಕೋರರೊಂದಿಗೆ ಇರಲು ಬಯಸುತ್ತವೆಯೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲ್ ಹಾಕಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .