Select Your Language

Notifications

webdunia
webdunia
webdunia
webdunia

ನೋಟು ನಿಷೇಧ: ಹಣ ಸಿಗದಿದ್ದಕ್ಕೆ ಬ್ಯಾಂಕ್ ಮೇಲೆ ದಾಳಿ

ನೋಟು ನಿಷೇಧ: ಹಣ ಸಿಗದಿದ್ದಕ್ಕೆ ಬ್ಯಾಂಕ್ ಮೇಲೆ ದಾಳಿ
ಅಹಮದಾಬಾದ್ , ಮಂಗಳವಾರ, 20 ಡಿಸೆಂಬರ್ 2016 (15:55 IST)
ಬ್ಯಾಂಕ್‌ನಲ್ಲಿ ಹಣದ ಕೊರತೆಯಿಂದ ಕೋಪಗೊಂಡ ಜನರು ಬ್ಯಾಂಕ್‌ಗಳ ಮೇಲೆ ದಾಳಿ ನಡೆಸಿದ ಘಟನೆ ಗುಜರಾತಿನಲ್ಲಿ ನಡೆದಿದೆ. 

 
ಅಮ್ರೇಲಿ ಜಿಲ್ಲೆಯ ಸಮಧಿಯಾಲಾ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ದೇನಾ ಬ್ಯಾಂಕ್‌ ಶಾಖೆಗಳ ಮುಂದೆ ನೂರಾರು ಜನರು ಹಣಕ್ಕಾಗಿ ಸಾಲುಗಟ್ಟಿದ್ದರು. ಆದರೆ ಬ್ಯಾಂಕ್‌ನಲ್ಲಿ ಹಣವಿಲ್ಲ ಎಂದು ಹೇಳಿದಾಗ ಕೋಪಗೊಂಡ ಗ್ರಾಹಕರು ದಾಂಧಲೆಯನ್ನು ನಡೆಸಿದ್ದಾರೆ. ಬ್ಯಾಂಕ್‌ಗಳಿಗೆ ಬೀಗ ಜಡಿದ ಉದ್ರಿಕ್ತ ಗುಂಪಿನಲ್ಲಿ ಹೆಚ್ಚಿನವರು ರೈತರಾಗಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.  
 
ಸುರೇಂದ್ರನಗರ ಜಿಲ್ಲೆಯಲ್ಲಿ ಕೂಡ ಜನರು ಕೆಲ ಬ್ಯಾಂಕ್ ಶಾಖೆಗಳ ಮೇಲೆ ದಾಳಿ ಮಾಡಿ ಕಿಟಕಿ ಬಾಗಿಲುಗಳನ್ನು ಮುರಿದಿದ್ದಾರೆ, ಶನಿವಾರದಿಂದ ನಿರಂತರವಾಗಿ ಮೂರು ದಿನ ಬ್ಯಾಂಕ್ ಬಾಗಿಲು ಮುಚ್ಚಿದ್ದಿದು ಜನರು ಈ ಪರಿಯಲ್ಲಿ ಕೋಪಗೊಳ್ಳಲು ಕಾರಣವಾಗಿತ್ತು. 
 
ಈ ಕುರಿತು ಪ್ರತಿಕ್ರಿಯಿಸಿರುವ ಬ್ಯಾಂಕ್ ಅಧಿಕಾರಿಗಳು ಸೋಮವಾರ ಮುಂಜಾನೆ ಬ್ಯಾಂಕ್‌ಗಳಿಗೆ ಹಣ ಬರದಿದ್ದುದರಿಂದ ಬಾಗಿಲು ತೆರೆಯದಿಲ್ಲ ಎಂದು ಬಾಗಿಲು ತೆರೆಯದಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 
 
ಕೇಂದ್ರಾಡಳಿತ ಪ್ರದೇಶ ದಾದ್ರಾ ನಗರ ಹವೇಲಿಯ ರಾಜಧಾನಿ ಸಿಲ್ವಾಸಾದಲ್ಲಿನ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಹಣ ವಿತರಿಸದಿದ್ದುದಕ್ಕೆ ಕೋಪಗೊಂಡ ಗ್ರಾಹಕರು ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಕುರುಕ್ಷೇತ್ರ: ಯುಪಿಯಲ್ಲಿ ಮೋದಿ - ರಾಹುಲ್ ವಾಕ್ಸಮರ