Select Your Language

Notifications

webdunia
webdunia
webdunia
webdunia

ದೆಹಲಿ ಸೆಕ್ಸ್ ಜಾಲ ಭೇದಿಸಿದ ಪೊಲೀಸರು: 8 ಮಂದಿ ಬಂಧನ

ದೆಹಲಿ ಸೆಕ್ಸ್ ಜಾಲ ಭೇದಿಸಿದ ಪೊಲೀಸರು:  8 ಮಂದಿ ಬಂಧನ
ನವದೆಹಲಿ , ಬುಧವಾರ, 31 ಆಗಸ್ಟ್ 2016 (11:36 IST)
ಯುವತಿಯರನ್ನು ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆಗೆ ಬಳಸಲು ಮಾರಾಟ ಮಾಡುತ್ತಿದ್ದ ಜಾಲವನ್ನು ದೆಹಲಿ ಪೊಲೀಸರು  ಭೇದಿಸಿ  8 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ದಂಪತಿ ಸಾಯಿರಾ ಬೇಗಂ ಮತ್ತು ಆಫಾಕ್ ಹುಸೇನ್ ಸೇರಿದ್ದಾರೆ. ದೆಹಲಿಯ ಗಾರ್ಸ್ಟಿನ್ ಬ್ಯಾಸ್ಟನ್ ರಸ್ತೆಯಲ್ಲಿ ಮಾನವಕಳ್ಳಸಾಗಣೆಯ ರೂವಾರಿಗಳಾಗಿದ್ದ ಇವರಿಗೆ 6 ಮಂದಿ ಸಹಚರರು ಸಾಥ್ ನೀಡಿದ್ದರು.
 
ದಂಪತಿ ಸಿಂಡಿಕೇಟ್‌ವೊಂದನ್ನು ನಡೆಸುತ್ತಿದ್ದರೆಂದು ಶಂಕಿಸಲಾಗಿದ್ದು, ನೇಪಾಳ ಮತ್ತು ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ, ಅಸ್ಸಾಂ, ಆಂಧ್ರ ಮತ್ತಿತರ ರಾಜ್ಯಗಳಿಂದ 5000ಕ್ಕೂ ಹೆಚ್ಚು ಯುವತಿಯರನ್ನು ಕಳ್ಳಸಾಗಣೆ ಮಾಡಿದ್ದಾರೆಂದು ಶಂಕಿಸಲಾಗಿದೆ.

 ಈ ದಂಧೆ ಮೂಲಕ ದಂಪತಿ ಸುಮಾರು ಇದುವರೆಗೆ 100 ಕೋಟಿ ರೂ. ಬಾಚಿಕೊಂಡಿದ್ದಾರೆಂದು ಹೇಳಲಾಗಿದ್ದು, 50,000 ರೂ.ಗೆ ಯುವತಿಯರನ್ನು ಖರೀದಿಸಿ 2 ಲಕ್ಷ ರೂ.ಗೆ ಮಾರುತ್ತಿದ್ದರೆಂದು ಆರೋಪಿಸಲಾಗಿದೆ.

ಯುವತಿಯರು ಚಿಕ್ಕ ವಯಸ್ಸಿನವರಾಗಿದ್ದರೆ ಅವರ ರೇಟ್ ಕೂಡ ದಂಪತಿ ಏರಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಜಿಬಿ ರಸ್ತೆಯ ವೇಶ್ಯಾಗೃಹಗಳಿಗೆ ಈ ಯುವತಿಯರನ್ನು ಒಂದೊಮ್ಮೆ ಕರೆತಂದ ಬಳಿಕ ಅಲ್ಮೆರಾ ಮತ್ತು ಸುರಂಗಗಳಲ್ಲಿ ಅಡಗಿಸಿಡಲಾಗುತ್ತಿತ್ತು.  ಸಣ್ಣ ಕೋಣೆಗಳಲ್ಲಿ ಗ್ರಾಹಕರಿಗೆ ತೃಪ್ತಿಪಡಿಸುವಂತೆ ಅವರಿಗೆ ಒತ್ತಾಯಿಸಲಾಗುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಎಫೆಕ್ಟ್: ಬಲೂಚಿಸ್ತಾನ ಸ್ಥಳೀಯರಿಂದ ಪಾಕ್, ಚೀನಾ ಹಸ್ತಕ್ಷೇಪಕ್ಕೆ ಪ್ರತಿಭಟನೆ