Select Your Language

Notifications

webdunia
webdunia
webdunia
webdunia

ಸ್ವಚ್ಛತೆಯಲ್ಲಿ ದೆಹಲಿ ವಿಶ್ವದರ್ಜೆಯಲ್ಲ, ಏಷ್ಯಾ ದರ್ಜೆಯಲ್ಲೂ ಇಲ್ಲ : ಹೈಕೋರ್ಟ್

ಸ್ವಚ್ಛತೆಯಲ್ಲಿ ದೆಹಲಿ ವಿಶ್ವದರ್ಜೆಯಲ್ಲ, ಏಷ್ಯಾ ದರ್ಜೆಯಲ್ಲೂ ಇಲ್ಲ : ಹೈಕೋರ್ಟ್
ನವದೆಹಲಿ , ಗುರುವಾರ, 29 ಜನವರಿ 2015 (16:41 IST)
ಕಸ ತೆರವುಗೊಳಿಸಲು ವಿಫಲವಾಗಿರುವ ದೆಹಲಿ ನಗರಪಾಲಿಕೆ ಮೇಲೆ ಕೆಂಡಾಮಂಡಲವಾಗಿರುವ ದೆಹಲಿ ಹೈಕೋರ್ಟ್ ಸ್ವಚ್ಛತೆ ವಿಷಯದಲ್ಲಿ ರಾಷ್ಟ್ರೀಯ ರಾಜಧಾನಿ ಏಷ್ಯಾ ವರ್ಗದಲ್ಲೂ ಕಂಡುಬರುವುದಿಲ್ಲ ಎಂದು ಕಿಡಿಕಾರಿದೆ. 
 
ದೆಹಲಿ, ಏಷ್ಯಾ ಮಟ್ಟದಲ್ಲಿ ಕೂಡ ಕಳಪೆ ಮಟ್ಟದಲ್ಲಿರುವಾಗ ಇದನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವುದಾದರೂ ಹೇಗೆ? ಎಲ್ಲಾ ನಿಯಮಗಳು ಮತ್ತು ಸಾಕಷ್ಟು ಸಫಾಯಿ ಕರ್ಮಚಾರಿಗಳು ಲಭ್ಯವಾಗಿರುವ ಹೊರತಾಗಿಯೂ ದೆಹಲಿಯ ಎಲ್ಲಾ ರಸ್ತೆಗಳನ್ನು ಮತ್ತು ಚರಂಡಿಗಳನ್ನು ಸರಿಯಾಗಿ ಶುದ್ಧಗೊಳಿಸಲಾಗುತ್ತಿಲ್ಲ " ಎಂದು ನ್ಯಾಯಮೂರ್ತಿಗಳಾದ ಬಿ.ಡಿ. ಅಹ್ಮದ್ ಮತ್ತು ಸಂಜೀವ್ ಸಚ್‌ದೇವಾ ಪೀಠ ಹೇಳಿದೆ.
 
"ಈ ಉದ್ದೇಶಕ್ಕಾಗಿ, ದೆಹಲಿ ಪುರಸಭೆ (MCD) ಆಯುಕ್ತ ಫೆಬ್ರವರಿ 13, 2001 ರಂದು ಹೊರಡಿಸಿದ್ದ ಆದೇಶವನ್ನು ಅನುಷ್ಠಾನಕ್ಕೆ ತರಬೇಕು ಎಂದು  ಅರ್ಜಿದಾರ (ಸ್ವಯಂ ಸೇವಾ ಸಂಸ್ಥೆ) ಸಲಹೆ ನೀಡಿದೆ. ಈ ಕುರಿತು ನಾವು ಪರಿಶೀಲಿಸುತ್ತಿದ್ದೇವೆ ಎಂದು ಕೋರ್ಟ್ ಹೇಳಿದೆ. 
 
ಆದರೆ ದೆಹಲಿ ಪುರಸಭೆ ಪರ ವಕೀಲ ಮತ್ತು ಉಪ ಆಯುಕ್ತರಿಗೆ ಈ ಆದೇಶದ ಬಗ್ಗೆ ತಿಳಿದೇ ಇಲ್ಲ ಎನ್ನುವುದು ಖೇದನೀಯ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ.  

Share this Story:

Follow Webdunia kannada