Webdunia - Bharat's app for daily news and videos

Install App

ಮನೆಗೆ ಮರಳಲು ನಿರಾಕರಿಸಿದ್ದಕ್ಕೆ ಪತ್ನಿ ಮೇಲೆ ಅ್ಯಸಿಡ್ ಎರಚಿದ

Webdunia
ಗುರುವಾರ, 20 ಅಕ್ಟೋಬರ್ 2016 (15:46 IST)
ಮನೆಗೆ ಮರಳಲು ಒಪ್ಪದ ಪತ್ನಿಗೆ, ಪೈಶಾಚಿಕ ಮನಸ್ಥಿತಿಯ ಪತಿ ಅ್ಯಸಿಡ್ ಎರಚಿದ ಹೇಯ ಘಟನೆ ನವದೆಹಲಿಯ ರೋಹಿಣಿಯಲ್ಲಿ ನಡೆದಿದೆ.

ಆರೋಪಿಯನ್ನು 34 ವರ್ಷದ ಪ್ರದೀಪ್ ಸಿಂಗ್(34) ಎಂದು ಗುರುತಿಸಲಾಗಿದ್ದು ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಆತನನ್ನು ಬಂಧಿಸಲಾಗಿದೆ. ಆತ 19 ವರ್ಷದ ಪತ್ನಿ ಅಮೃತ್ ಕೌರ್ ಮೇಲೆ ಅ್ಯಸಿಡ್ ಎರಚಿದ್ದಾನೆ.
 
ಮಂಗಳವಾರ ಅಮೃತ್ ಕೌರ್ ತನ್ನ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
 
ಕೌರ್ ಕಳೆದ 10 ದಿನಗಳ ಹಿಂದೆ ಪತಿಯ ಮನೆಯನ್ನು ತ್ಯಜಿಸಿ ಅಮ್ಮನ ಮನೆಯಲ್ಲಿ ವಾಸವಾಗಿದ್ದಳು. ಎಷ್ಟೇ ಒತ್ತಾಯಿಸಿದರೂ ಪತ್ನಿ ಮನೆಗೆ ಮರಳಲು ಒಪ್ಪುತ್ತಿಲ್ಲವೆಂದು ಪ್ರದೀಪ್ ಆಕೆಯ ಮೇಲೆ ಈ ರೀತಿಯಾಗಿ ಸೇಡು ತೀರಿಸಿಕೊಂಡಿದ್ದಾನೆ. 
 
ರಾತ್ರಿ 8.30ರ ಸುಮಾರಿಗೆ ಕೌರ್  ತನ್ನ ಸಹೋದರಿ ಇಶಾ ಜತೆಯಲ್ಲಿ ಚಿಕ್ಕಮ್ಮನ ಮನೆ ಕಡೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಭೇಟಿಯಾದ ಸಿಂಗ್ ಅವರಿಬ್ಬರನ್ನು ಒತ್ತಾಯದಿಂದ ಹತ್ತಿರದ ಪಾರ್ಕ್ ಒಂದಕ್ಕೆ ಕರೆದೊಯ್ದ. ಅಲ್ಲಿ ಆತನ ಕಸಿನ್ಸ್ ಜೀತು ಮತ್ತು ಕಪಿಲ್ ಇದ್ದರು.
 
ಬಳಿಕ ತಂಗಿಯ ಹಿಂದೆಯೇ ಪತ್ನಿಗೆ ಥಳಿಸಲು ಪ್ರಾರಂಭಿಸಿದ ಆತನಿಗೆ ಕೌರ್ ಸಹ ಅನೇಕ ಬಾರಿ ಕಪಾಳ ಮೋಕ್ಷ ಮಾಡಿದ್ದಾಳೆ. ತಕ್ಷಣ ಅಡಗಿಸಿಟ್ಟುಕೊಂಡಿದ್ದ ಅ್ಯಸಿಡ್ ಬಾಟಲ್ ಹೊರ ತೆಗೆದ ಆತ ಆಕೆಯ ಮುಖಕ್ಕೆ ಹಾಕಲು ಪ್ರಯತ್ನಿಸಿದ್ದಾನೆ.
 
ನನ್ನ ಮುಖಕ್ಕೆ ಅ್ಯಸಿಡ್ ಹಾಕಲು ಪ್ರಯತ್ನಿಸಿದ. ಆದರೆ ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಆದರೆ ಅ್ಯಸಿಡ್ ಮುಖ ಮತ್ತು ಹೊಟ್ಟೆಯ ಮೇಲೆ ಬಿತ್ತು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೌರ್ ತಿಳಿಸಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

ಮುಂದಿನ ಸುದ್ದಿ
Show comments