Webdunia - Bharat's app for daily news and videos

Install App

ಉಪರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ಇತ್ತ ನಜೀಬ್ ಜಂಗ್

Webdunia
ಗುರುವಾರ, 22 ಡಿಸೆಂಬರ್ 2016 (17:02 IST)
ದೆಹಲಿ ಲಿಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ "ಮೊದಲ ಪ್ರೀತಿ ಶಿಕ್ಷಣ" ಕ್ಷೇತ್ರಕ್ಕೆ ಮರಳಲು ಬಯಸಿರುವುದಾಗಿ ಅವರು ಹೇಳಿದ್ದಾರೆ. 

ಅಧಿಕಾರಾವಧಿ ಮುಗಿಯುವ ಮುನ್ನವೇ ಅವರು ರಾಜೀನಾಮೆ ಸಲ್ಲಿಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಈ ಕುರಿತು ಕೆಲವು ತಿಂಗಳಿಂದಲೇ ಯೋಚಿಸುತ್ತಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರು ಉಪನ್ಯಾಸ ವೃತ್ತಿಗೆ ಮರಳುತ್ತಾರೆ ಎಂದು ಹೇಳಲಾಗುತ್ತಿದೆ.
 
2013 ಜುಲೈನಿಂದ ಅಧಿಕಾರ ವಹಿಸಿಕೊಂಡಿದ್ದ ಜಂಗ್ ಇಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.  ಅವರ18 ತಿಂಗಳ ಅಧಿಕಾರಾವಧಿ ಬಾಕಿ ಇತ್ತು. 
 
ಅಧಿಕಾರವಾಧಿಯಲ್ಲಿ ತಮಗೆ ಸಹಕಾರ ನೀಡಿದ್ದಕ್ಕಾಗಿ  ಪ್ರಧಾನಿ ಮೋದಿ ಅವರಿಗೆ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಂಗ್ ಕೃತಜ್ಞತೆಗಳನ್ನು ಹೇಳಿದ್ದಾರೆ.
 
ಜತೆಗೆ ಒಂದು ವರ್ಷದ ರಾಷ್ಟ್ರಪತಿ ಆಡಳಿತದ ಸಮಯದಲ್ಲಿ ತಮಗೆ ತೋರಿಸಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕಾಗಿ ಅವರು ದೆಹಲಿ ವಾಸಿಗಳಿಗೆ  ಧನ್ಯವಾದ ಸಲ್ಲಿಸಿದ್ದಾರೆ.
 
ಅಧಿಕಾರದಲ್ಲಿದ್ದಷ್ಟು ದಿನ ಕೇಜ್ರಿವಾಲ್ ಜತೆಗಿನ ಜಟಾಪಟಿಯಿಂದಲೇ ಅವರು ಹೆಚ್ಚು ಸುದ್ದಿಯಲ್ಲಿದ್ದರು. ಕೇಜ್ರಿ ಜಂಗ್ ಸಂಬಂಧ ಹಾವು ಮುಂಗುಸಿಯಂತಿದ್ದು, ಜಂಗ್ ಕೇಂದ್ರದ ಏಜೆಂಟ್‌ನಂತೆ ವರ್ತಿಸುತ್ತಾರೆ ಎಂದು ಕೇಜ್ರಿವಾಲ್ ಸದಾ ಆರೋಪಿಸುತ್ತಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರು ಚಾಮುಂಡಿ ಆಷಾಢ ಶುಕ್ರವಾರ ದರ್ಶನಕ್ಕೆ 2000 ರೂ: ಜನರಿಂದ ಆಕ್ರೋಶ

ಅಹಮದಾಬಾದ್ ವಿಮಾನ ದುರಂತ: 11ಎ ಸೀಟ್ ಬುಕಿಂಗ್ ಗೆ ಹೆಚ್ಚಿ ಡಿಮ್ಯಾಂಡ್

Arecanut price today: ಆರಕ್ಕೇರದ ಮೂರಕ್ಕಿಳಿಯದ ಅಡಿಕೆ, ರೈತರಿಗೆ ನಿರಾಸೆ

Gold Price today: ಚಿನ್ನದ ಬೆಲೆ ಏರಿಕೆ ನಡುವೆ ಇಂದು ಕೊಂಚ ರಿಲೀಫ್

Viral video: ಸೈಕ್ಲಿಂಗ್ ಮಾಡಲು ಹೋಗಿ ದಢಾರನೆ ಬಿದ್ದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments