Select Your Language

Notifications

webdunia
webdunia
webdunia
webdunia

6 ತಿಂಗಳಲ್ಲಿ ಮೂರು ಕಾನೂನು ಮಂತ್ರಿಗಳನ್ನು ಕಂಡ ದೆಹಲಿ

6 ತಿಂಗಳಲ್ಲಿ ಮೂರು ಕಾನೂನು ಮಂತ್ರಿಗಳನ್ನು ಕಂಡ ದೆಹಲಿ
ನವದೆಹಲಿ , ಮಂಗಳವಾರ, 1 ಸೆಪ್ಟಂಬರ್ 2015 (15:15 IST)
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಪಿಲ್ ಮಿಶ್ರಾ ನಿರ್ವಹಿಸುತ್ತಿದ್ದ ಕಾನೂನು ಖಾತೆಯನ್ನು ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರಿಗೆ ಹಸ್ತಾಂತರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಕಳೆದ 6 ತಿಂಗಳಲ್ಲಿ ದೆಹಲಿ ಮೂವರು ಕಾನೂನು ಸಚಿವರನ್ನು ಕಾಣುವಂತಾಗಿದೆ.
 

 
ಕಾನೂನು ಖಾತೆ ಹೊಣೆ ಹೊತ್ತಿದ್ದ ಜಿತೇಂದ್ರ ತೋಮರ್ ನಕಲಿ ಕಾನೂನು ಪದವಿ ಆರೋಪದ ಮೇಲೆ ಬಂಧನಕ್ಕೊಳಪಟ್ಟಿದ್ದರಿಂದ ಕಳೆದ ಜೂನ್ ತಿಂಗಳಲ್ಲಿ ಮಿಶ್ರಾ ಅವರಿಗೆ ಕಾನೂನು ಖಾತೆ ಜವಾಬ್ದಾರಿಯನ್ನು ವಹಿಸಲಾಗಿತ್ತು. 
 
ಮೂಲಗಳ ಪ್ರಕಾರ ಮಿಶ್ರಾರ ಅತ್ಯುತ್ಸಾಹ ಶೈಲಿಯ ಕಾರ್ಯನಿರ್ವಹಣೆಯೇ ಅವರನ್ನು ಈ ಮಹತ್ವದ ಪದದಿಂದ ಹೊರ ಹೋಗುವಂತೆ ಮಾಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮಿಶ್ರಾ ದೆಹಲಿ ಜಲ ಮಂಡಳಿ (DJB) ನೀರಿನ ಟ್ಯಾಂಕರ್ ನಿರ್ವಹಣೆ, ವಿತರಣೆ ವ್ಯವಸ್ಥೆಯ ಮೇಲೆ ಮಾಡಿದ್ದ ಸತ್ಯಶೋಧನೆ ವರದಿಯನ್ನಾಧರಿಸಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್ ಅವರ ಮೇಲೆ ಎಫ್ಐಆರ್ ದಾಖಲಿಸುವಂತೆ ಮಿಶ್ರಾ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದರು.  ದೆಹಲಿ ಸರ್ಕಾರ ಈ ವರದಿಯನ್ನು ಬಹಿರಂಗ ಪಡಿಸುವ ಮುನ್ನವೇ ಮಿಶ್ರಾ ಧಾವಂತವನ್ನು ಪ್ರದರ್ಶಿಸಿದ್ದರು. 
 
"ನಾನು ಬಹುದೊಡ್ಡ ಸಂಗತಿಯನ್ನು ಬಹಿರಂಗ ಮಾಡಿದ್ದೇನೆ. ನನ್ನ ಈ ನಡೆಯ ಪರಿಣಾಮ ಸಚಿವ ಸ್ಥಾನದಿಂದ ಕೂಡ ನನ್ನನ್ನು ಕೆಳಗಿಳಿಸುವ ಸಾಧ್ಯತೆ ಇದೆ", ಎಂದು ಮಿಶ್ರಾ ಈ ಸಹ ಈ ಪತ್ರ ಬರೆದಾಗಲೇ ಹೇಳಿಕೊಂಡಿದ್ದರು.
 
ಆಪ್ ಸರ್ಕಾರದಲ್ಲಿ ಕಾನೂನು ಸಚಿವರು ಸದಾ ವಿವಾದಗಳಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಆಪ್ ಈ ಹಿಂದೆ 49 ದಿನಗಳ ಆಡಳಿತ ನಡೆಸಿದ್ದಾಗ ಸೋಮನಾಥ್ ಭಾರ್ತಿ ಕಾನೂನು ಖಾತೆಯನ್ನು ಸಂಭಾಳಿಸಿದ್ದರು. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ನೈಜಿರಿಯನ್ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಮಧ್ಯರಾತ್ರಿ ರೈಡ್ ನಡೆಸಿ ಭಾರ್ತಿ ಸಹ ವಿವಾದಕ್ಕೆ ಗುರಿಯಾಗಿದ್ದರು. 

Share this Story:

Follow Webdunia kannada