Select Your Language

Notifications

webdunia
webdunia
webdunia
webdunia

ಗ್ಯಾಂಗ್‌ರೇಪ್: 72 ವರ್ಷದ ನಿವೃತ್ತ ನೌಕಾಧಿಕಾರಿಗೆ 20 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

ಗ್ಯಾಂಗ್‌ರೇಪ್: 72 ವರ್ಷದ ನಿವೃತ್ತ ನೌಕಾಧಿಕಾರಿಗೆ 20 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್
ನವದೆಹಲಿ , ಬುಧವಾರ, 20 ಆಗಸ್ಟ್ 2014 (15:33 IST)
ಮಹಿಳೆಯ ಮೇಲೆ ನಿರಂತರವಾಗಿ ಗ್ಯಾಂಗ್‌ರೇಪ್ ಎಸಗಿದ್ದಲ್ಲದೇ ಜೀವ ಬೆದರಿಕೆಯೊಡ್ಡಿದ ಆರೋಪದ ಹಿನ್ನೆಲೆಯಲ್ಲಿ 72 ವರ್ಷ ವಯಸ್ಸಿನ ನಿವೃತ್ತ ನೌಕಾದಳದ ಅದಿಕಾರಿ ಮತ್ತು ಇತರ ಇಬ್ಬರಿಗೆ ಕೋರ್ಟ್ 20 ವರ್ಷಗಳ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.  
 
ಹೆಚ್ಚುವರಿ ನ್ಯಾಯಮೂರ್ತಿ ವಿರೇಂದ್ರ ಭಟ್, ಆರೋಪಿಗಳಾದ 72 ವರ್ಷ ವಯಸ್ಸಿನ ನಿವೃತ್ತ ನೌಕಾಧಿಕಾರಿ 45 ವರ್ಷ ವಯಸ್ಸಿನ ರೋಹತಾಶ್ ಮಾನ್ ಮತ್ತು ಈಶ್ವರ್ ಸಿಂಗ್‌ಗೆ 20 ವರ್ಷಗಳ ಶಿಕ್ಷೆಯನ್ನು ವಿಧಿಸಿದ್ದಾರೆ.   
 
ಆರೋಪಿಗಳಿಗೆ 20 ವರ್ಷ ಶಿಕ್ಷೆ ವಿಧಿಸುವುದರೊಂದಿಗೆ ತಲಾ 25 ಸಾವಿರ ರೂಪಾಯಿಗಳ ದಂಡವನ್ನು ಹೇರಿದ್ದು, ದಂಡದ ಮೊತ್ತವನ್ನು ಗ್ಯಾಂಗ್‌ರೇಪ್‌ಗೊಳಗಾದ ಮಹಿಳೆಗೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
 

Share this Story:

Follow Webdunia kannada