Select Your Language

Notifications

webdunia
webdunia
webdunia
webdunia

ಸ್ಲಮ್ ವಿವಾದ: ಮತ್ತೆ ಶುರುವಾಯ್ತು ಕೇಜ್ರಿವಾಲ್ ಜಂಗ್ ಮಧ್ಯೆ ವಾಕ್ಸಮರ್

ಸ್ಲಮ್ ವಿವಾದ: ಮತ್ತೆ ಶುರುವಾಯ್ತು ಕೇಜ್ರಿವಾಲ್ ಜಂಗ್ ಮಧ್ಯೆ ವಾಕ್ಸಮರ್
ನವದೆಹಲಿ , ಮಂಗಳವಾರ, 1 ಸೆಪ್ಟಂಬರ್ 2015 (21:20 IST)
ನಗರದಲ್ಲಿರುವ ಸ್ಲಮ್‌ಗಳನ್ನು ತೆರವುಗೊಳಿಸುತ್ತಿರುವುದು ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಅಭಿವೃದ್ಧಿ ನಿಗಮದ ಮುಖ್ಯಸ್ಥ ಲೆಫ್ಟಿನೆಂಟ್ ಗೌವರ್ನರ್ ನಜೀಬ್ ಜಂಗ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
   
ದೆಹಲಿ ಅಭಿವೃದ್ಧಿ ನಿಗಮ ದಕ್ಷಿಣ ದೆಹಲಿಯ ಮೆಹರೌಲಿ ಪ್ರದೇಶದಲ್ಲಿರುವ ಸ್ಲಮ್‌ಗಳನ್ನು ಅನಧಿಕೃತವಾಗಿ ತೆರವುಗೊಳಿಸುತ್ತಿರುವುದರ ವಿರುದ್ಧ ಜಂಗ್ ವಿರುದ್ಧ ಕೇಜ್ರಿವಾಲ್ ಜಂಗ್ ಸಾರಿದ್ದಾರೆ.
 
ಡಿಡಿಎ ಮುಖ್ಯಸ್ಥರಾದ ನಜೀಬ್ ಜಂಗ್‌ ಅವರಿಗೆ ಮೂರು ಪುಟಗಳ ಪತ್ರ ಬರೆದ ಕೇಜ್ರಿವಾಲ್, ಡಿಡಿಎ ಮತ್ತಷ್ಟು ಸ್ಲಮ್‌ಗಳನ್ನು ತೆರವುಗೊಳಿಸುವ ಬಗ್ಗೆ ಯೋಜನೆ ಹೊಂದಿದೆ. ಮೆಹರೌಲಿ ಪ್ರದೇಶದಲ್ಲಿರುವ ಸ್ಲಮ್‌ಗಳಲ್ಲಿರುವ ಜನತೆಗೆ ನೋಟಿಸ್ ನೀಡದೆ ಪುನರ್ವಸತಿ ಕಲ್ಪಿಸದೆ ಗುಡಿಸಲುಗಳನ್ನು ನಾಶ ಮಾಡಲಾಗಿದೆ.ಘಟನೆಯಲ್ಲಿ ಒಂದು ಹಸುಳೆ ಕೂಡಾ ಸಾವನ್ನಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಕಳೆದ 2014ರಲ್ಲಿ ದೆಹಲಿ ವಿಧಾನಸಭೆಯಲ್ಲಿ ಕಾನೂನು ಜಾರಿಗೆ ತರಲಾಗಿದ್ದು ಕಾನೂನಿನ ಪ್ರಕಾರ 2006 ಜನೆವರಿ 1 ನೇ ಕ್ಕಿಂತ ಮೊದಲಿದ್ದ ಗುಡಿಸಲುಗಳನ್ನು ತೆರವುಗೊಳಿಸುವಂತಿಲ್ಲ. ರಸ್ತೆಗಳ ಭೂಮಿಯನ್ನು ಕಬಳಿಸಿದ್ದಲ್ಲಿ ಅಥವಾ ಸರಕಾರಕ್ಕೆ ಅಗತ್ಯವಾದ ಭೂಮಿ ಬೇಕಾಗಿದ್ದಲ್ಲಿ ಮಾತ್ರ ಸ್ಲಮ್‌ಗಳನ್ನು ಕೆಡುವಬಹುದಾಗಿದೆ ಎನ್ನುವ ಬಗ್ಗೆ ಕಾನೂನಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. 
 
ಸ್ಲಮ್‌ಗಳಲ್ಲಿ ವಾಸಿಸುತ್ತಿರುವವರಿಗೆ ಪುನರ್ವಸತಿ ಕಲ್ಪಿಸಿದ ನಂತರವಷ್ಟೆ ಕಾರ್ಯಾಚರಣೆ ನಡೆಸಬಹುದಾಗಿದೆ. ಪುನರ್ವಸತಿ ಕಲ್ಪಿಸದೆ ಡಿಡಿಎಂ ಮನಬಂದಂತೆ ವರ್ತಿಸುವುದು ಸರಿಯಲ್ಲ ಎಂದು ದೆಹಲಿ ಸಿಎಂ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada