Webdunia - Bharat's app for daily news and videos

Install App

ಮೋದಿ ಕರೆಗೆ ಸ್ಪಂದನೆ: ಶಾಲೆ ಮತ್ತು ಸ್ಲಮ್‌ ದತ್ತು ತೆಗೆದುಕೊಂಡ ಬಿಜೆಪಿ ಶಾಸಕರು

Webdunia
ಸೋಮವಾರ, 18 ಆಗಸ್ಟ್ 2014 (18:04 IST)
ನಮೋ ಪರಿಣಾಮ ಎಲ್ಲರನ್ನೂ ಬಲವಾಗಿ ಆವರಿಸಿಕೊಳ್ಳುತ್ತಿದೆ. ಅದರಲ್ಲೂ  ದೆಹಲಿಯ ಬಿಜೆಪಿ ಶಾಸಕರು, ಪುರಸಭೆಯ ಸದಸ್ಯರು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದ್ದು, ತಮ್ಮ ಕ್ಷೇತ್ರದಲ್ಲಿ ಬರುವ ಒಂದು ಸ್ಲಮ್ ಮತ್ತು ಒಂದು ಶಾಲೆಯನ್ನು ದತ್ತು ಪಡೆದುಕೊಂಡು ಅಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ಸೌಲಭ್ಯ ಒದಗಿಸುವುದರ  ದಿಶೆಯಲ್ಲಿ ಎಲ್ಲ ಕ್ರಮ ಕೈಗೊಳ್ಳುವತ್ತ ಮುನ್ನಡೆದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ತಮ್ಮಸ್ವಾತಂತ್ರ್ಯೋತ್ಸವದ ಭಾಷಣ ಮಾಡುತ್ತ  ಪ್ರತಿಯೊಬ್ಬ ಸಂಸದರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು 2016ರ ಒಳಗೆ  ಅದನ್ನು ಮಾದರಿ ಗ್ರಾಮವನ್ನಾಗಿಸಬೇಕು ಎಂದು ಸೂಚನೆ ನೀಡಿದ ಪರಿಣಾಮ ದೆಹಲಿಯ ಜನಪ್ರತಿನಿಧಿಗಳು ಈ ಗುರುತರ ನಡೆಯನ್ನು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. 
 
ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಕರೆಗೆ ಅನುಗುಣವಾಗಿ ಬಿಜೆಪಿ ಶಾಸಕರು ಮತ್ತು ಪುರಸಭೆಯ ಜನಪ್ರತಿನಿಧಿಗಳು ತಮ್ಮ ಪರಿಮಿತಿಗೆ ಬರುವ ಒಂದು ಶಾಲೆ ಮತ್ತು ಸ್ಲಮ್‌ ಒಂದನ್ನು ದತ್ತು  ತೆಗೆದುಕೊಂಡು ಈ ಬಾರಿಯ  ಹಣಕಾಸು ವರ್ಷ ಮುಗಿಯುವುದರೊಳಗೆ ಅಲ್ಲಿ ಶೌಚಾಲಯ ನಿರ್ಮಾಣ , ಕುಡಿಯುವ ನೀರಿನ ವ್ಯವಸ್ಥೆ, ಸಂಸದರ ಮತ್ತು ಕೌನ್ಸಲರ್ಸ್‌ ನಿಧಿಯಿಂದ ನೀರಿನ ಎಟಿಎಮ್  ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಿದ್ದಾರೆ ಎನ್ನುತ್ತಾರೆ ದೆಹಲಿ ಬಿಜೆಪಿ ಮುಖ್ಯಸ್ಥ ಸತೀಶ್ ಉಪಾಧ್ಯಾಯ್.  
 
ದೆಹಲಿಯಲ್ಲಿ ಬಿಜೆಪಿಯ ಪಕ್ಷದಿಂದ 29 ಶಾಸಕರು ಮತ್ತು 165 ಕೌನ್ಸಲರ್ಸ್‌ಗಳಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಪರ ಕಾರ್ಯಗಳನ್ನು ಹಮ್ಮಿಕೊಳ್ಳಲು ಪ್ರತಿವರ್ಷ ಪ್ರತಿ ಶಾಸಕರಿಗೆ 4 ಕೋಟಿ ಮತ್ತು  ಕೌನ್ಸಲರ್ಸ್‌ಗಳಿಗೆ  1 ಕೋಟಿ ನೀಡಲಾಗುತ್ತದೆ.
 
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿಯ ಮಾಜಿ ಅಧ್ಯಕ್ಷ ವಿಜೆಂದರ್ ಗುಪ್ತಾ, ದೆಹಲಿಯ ಪ್ರತಿಯೊಬ್ಬ ಶಾಸಕ ಮತ್ತು ಕೌನ್ಸಲರ್ಸ್‌ ಬಳಿ ಮೋದಿಯವರ ಸಲಹೆಯನ್ನು ಅನುಸರಿಸುವಂತೆ ಸೂಚಿಸಲಾಗಿದೆ. ದೆಹಲಿ ದೇಶದ ರಾಜಧಾನಿ, ಆದರೆ ರಾಜಧಾನಿಯಲ್ಲೂ ಕೂಡ ಅನೇಕ ಪ್ರದೇಶಗಳಲ್ಲಿ ಬಯಲು ಮಲ ವಿಸರ್ಜನೆ ರೂಢಿಯಾಗಿದೆ. ಅನೇಕ ಶಾಲೆಗಳಲ್ಲಿ  ಸರಿಯಾದ ಶೌಚಾಲಯಗಳಿಲ್ಲ. ಬಿಜೆಪಿ ಸಂಸದರು ಮತ್ತು  ಕೌನ್ಸಲರ್ಸ್‌ ಒಂದು ಶಾಲೆ ಮತ್ತು ಒಂದು ಸ್ಲಮ್‌ನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಹೆಣ್ಣು ಮಕ್ಕಳ  ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments