ನವದೆಹಲಿ: ಅಬಕಾರಿ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಜೈಲಿನಲ್ಲಿ ಅನಾರೋಗ್ಯ ಕಾಡಿದೆ.
ಮಧುಮೇಹದಿಂದ ಬಳಲುತ್ತಿರುವ ಕೇಜ್ರಿವಾಲ್ ಇದೀಗ ಜೈಲು ಪಾಲಾದ ಮೇಲೆ 4.5 ಕೆ.ಜಿ ತೂಕ ಕಳೆದುಕೊಂಡಿದ್ದಾರೆ. ರಕ್ತದಲ್ಲಿ ಸಕ್ಕರೆ ಮಟ್ಟ ಏರುಪೇರಾಗಿದ್ದು ಅವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಮಾರ್ಚ್ 21 ರಂದು ಅವರನ್ನು ಅಬಕಾರಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ಅವರ ಅನಾರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮನೆ ಆಹಾರ ನೀಡಲಾಗುತ್ತಿದೆ. ಪತ್ನಿ ಸುನೀತಾ ಮತ್ತು ವಕೀಲರ ಭೇಟಿಗೆ ಕೇಜ್ರಿವಾಲ್ ಗೆ ಅವಕಾಶ ನೀಡಲಾಗಿದೆ.
ಇನ್ನು, ತಮ್ಮ ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ದೆಹಲಿ ಕೋರ್ಟ್ ವಿಚಾರಣೆ ನಡೆಸಲಿದೆ. ಆದರೆ ಕೇಜ್ರಿವಾಲ್ ವಿರುದ್ಧ ಇಡಿ ಆರೋಪ ಪಟ್ಟಿಯನ್ನೇ ಕೋರ್ಟ್ ಗೆ ಸಲ್ಲಿಸಿದೆ. ಹೀಗಾಗಿ ಇಂದು ಅವರಿಗೆ ಮಧ್ಯಂತರ ಜಾಮೀನು ಸಿಗಬಹುದೇ ಎಂಬುದು ಕುತೂಹಲಕಾರಿಯಾಗಿದೆ.