Select Your Language

Notifications

webdunia
webdunia
webdunia
webdunia

ವ್ಯಾಪಂ ಹಗರಣ: ಮತ್ತಿಬ್ಬರು ಬಲಿ, ನಿನ್ನೆ ಪತ್ರಕರ್ತ, ಇಂದು ಕಾಲೇಜ್ ಡೀನ್

ವ್ಯಾಪಂ ಹಗರಣ: ಮತ್ತಿಬ್ಬರು ಬಲಿ, ನಿನ್ನೆ ಪತ್ರಕರ್ತ, ಇಂದು ಕಾಲೇಜ್ ಡೀನ್
ನವದೆಹಲಿ , ಭಾನುವಾರ, 5 ಜುಲೈ 2015 (12:03 IST)
ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ಮತ್ತು ಆರೋಪಿಗಳ ಸಾವಿನ ಸರಣಿ ಮುಂದುವರೆದಿದ್ದು ಇಂದು ಬೆಳಿಗ್ಗೆ ಜಬಲ್‌ಪುರದ ಎಎಸ್ ಮೆಡಿಕಲ್ ಕಾಲೇಜು ಡೀನ್ ಅನುಮಾನ್ಪದವಾಗಿ ಸಾವನ್ನಪ್ಪಿದ್ದಾರೆ. 2010ರಿಂದ ಪ್ರಾರಂಭವಾದ ಸಾವಿನ ಸರಣಿ ಇಲ್ಲಿಯವರೆಗೆ 46 ಜನರನ್ನು ಬಲಿ ತೆಗೆದುಕೊಂಡಿದೆ.

ದೆಹಲಿಯ ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಹೊಟೆಲ್ ಉಪ್ಪಲ್‌ನಲ್ಲಿ ಡಾಕ್ಟರ್ ಅರುಣ್ ಶರ್ಮಾ ಮೃತದೇಹ ಪತ್ತೆಯಾಗಿದೆ. ರೂಮ್ ಒಳಗಡೆಯಿಂದ ಲಾಕ್ ಆಗಿದ್ದು ಶವದ ಬಳಿ ಮದ್ಯ ಮತ್ತು ಔಷಧಗಳು ಪತ್ತೆಯಾಗಿವೆ. 
 
ನಿನ್ನೆಯಷ್ಟೇ ಪತ್ರಕರ್ತ ಅಕ್ಷಯ ಸಿಂಗ್ ಮೃತಪಟ್ಟಿದ್ದರು. ಇದೀಗ ಡೀನ್ ಸಾವನ್ನಪ್ಪಿದ್ದು ಹೆಚ್ಚಿನ ಆತಂಕವನ್ನು ಮೂಡಿಸಿದೆ. ಸಿಂಗ್ ಹಗರಣದ ಕುರಿತು ತನಿಖೆ ನಡೆಸಲು ಹೋಗಿದ್ದ ವೇಳೆ ಏಕಾಏಕಿ ಬಾಯಲ್ಲಿ ನೊರೆ ಬಂದು ಮೃತ ಪಟ್ಟಿದ್ದರು. 
 
ಇಲ್ಲಿಯವರೆಗೆ ಹಗರಣಕ್ಕೆ ಸಂಬಂಧಿಸಿದಂತೆ 46 ಜನರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಮನೆ, ಲಾಡ್ಜ್, ಹೊಟೆಲ್, ರೈಲು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಅಕ್ಷಯಸಿಂಗ್ ಹೊರತು ಪಡಿಸಿ ಉಳಿದವರೆಲ್ಲರೂ ಪ್ರಕರಣದ ಆರೋಪಿಗಳಾಗಿದ್ದಾರೆ. 
 
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಅವರ ಸಂಬಂಧಿಗಳು ರಾಜ್ಯಪಾಲ ರಾಮ ನರೇಶ್ ಯಾದವ್ ಮತ್ತು ಹಲವು ಪ್ರಭಾವಿ ರಾಜಕಾರಣಿಗಳು ಈ ಹಗರಣದಲ್ಲಿ ಶಾಮೀಲಾಗಿದ್ದಾರೆಂದು ಹೇಳಲಾಗುತ್ತಿದೆ.
 
ಈ ಸರಣಿ ಸಾವುಗಳ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಹಗರಣ ಹಲವು ಘಟಾನುಘಟಿಗಳ ಬಣ್ಣವನ್ನು ಬಯಲು ಮಾಡುವ ಸಾಧ್ಯತೆ ಇರುವುದರಿಂದ ವ್ಯವಸ್ಥಿತವಾಗಿ ಕೊಲೆಗೈದು ಸಾಕ್ಷ್ಯನಾಶ ಮಾಡಲಾಗುತ್ತಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 2000 ಮಂದಿ ಈಗಾಗಲೇ ಜೈಲಿನಲ್ಲಿದ್ದು, ಮತ್ತೂ ಸಾವಿರಾರು ಮಂದಿ ಜೈಲಿನ ಹೊರಗಿದ್ದಾರೆ. 
 
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. 

Share this Story:

Follow Webdunia kannada