Webdunia - Bharat's app for daily news and videos

Install App

ಅತ್ಯಾಚಾರಕ್ಕೊಳಗಾಗಿ ಆರು ದಿನಗಳಾದ್ರೂ ವೈದ್ಯಕೀಯ ಪರೀಕ್ಷೆ ನಡೆಸದ ಪೊಲೀಸರು

Webdunia
ಸೋಮವಾರ, 30 ಮೇ 2016 (20:36 IST)
ವಿವಾಹಿತ ಕಿವುಡ, ಮೂಗಿ ಮಹಿಳೆಯೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ಮನೆಯ ಹೊರಭಾಗದಲ್ಲಿ ಮಲಗಿದ್ದಾಗ ಆಕೆಯ ಮೇಲೆ ಆರೋಪಿಯೊಬ್ಬ ಅತ್ಯಾಚಾರವೆಸಗಿ ಆರು ದಿನಗಳಾಗಿದ್ದರೂ ಆಕೆಗೆ ವೈದ್ಯಕೀಯ ಪರೀಕ್ಷೆ ನಡೆಸದಿರುವ ಪೊಲೀಸರ ಕ್ರಮ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
 
ಸಿರೋಂಚಾ ತಹಸೀಲ್ ಜಿಲ್ಲೆಯ ವ್ಯಾಪ್ತಿಗೆ ಬರುವ ಬಮ್ನಿ ಗ್ರಾಮದ ನಿವಾಸಿಯಾಗಿರುವ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಸ್ತ್ರೀರೋಗ ತಜ್ಞರು ಇಲ್ಲದಿರುವದೇ ವೈದ್ಯಕೀಯ ಪರೀಕ್ಷೆ ವಿಳಂಬಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  
 
ಮಹಿಳೆ ಅತ್ಯಾಚಾರಕ್ಕೊಳಗಾದ ಸಂದರ್ಭದಲ್ಲಿ ಪತಿ ಬೇರೆ ಗ್ರಾಮಕ್ಕೆ ತೆರಳಿದ್ದು, ವಾಪಸ್ ಮರಳಿದ ನಂತರ ಪತ್ನಿ ಸನ್ನೆಗಳ ಮೂಲಕ ತನ್ನ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ಪತಿ ಮತ್ತು ಪತ್ನಿ ಹತ್ತಿರದ ಬಮ್ನಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. 
 
ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಮಹಿಳೆ ಪೊಲೀಸ್ ಪೇದೆಯೊಂದಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಆದರೆ, ಸ್ತ್ರೀರೋಗ ತಜ್ಞರು ಆಸ್ಪತ್ರೆಯಲ್ಲಿರದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
 
ಪೊಲೀಸರು ಮತ್ತು ಆಸ್ಪತ್ರೆಯ ಸಿಬ್ಬಂದಿಯ ವರ್ತನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದು. ಮಹಿಳೆಗೆ ವೈದ್ಯಕೀಯ ಪರೀಕ್ಷೆ ಮಾಡಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಾಯ್ಲೆಟ್‌ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮುಂದಿನ ಸುದ್ದಿ
Show comments