ತನ್ನೊಂದಿಗೆ ಸೆಕ್ಸ್‌ಗೆ ನಿರಾಕರಿಸಿದ ಲಿವ್ ಇನ್ ಗೆಳತಿ ಮೇಲೆ ಮಾರಣಾಂತಿಕ ಹಲ್ಲೆ !

Webdunia
ಶನಿವಾರ, 19 ಆಗಸ್ಟ್ 2023 (10:27 IST)
ಲಕ್ನೋ : ತನ್ನೊಂದಿಗೆ ಸೆಕ್ಸ್ ಮಾಡಲು ನಿರಾಕರಿಸಿದ ಲಿವ್ ಇನ್ ಗೆಳತಿ ಮೇಲೆ ಸ್ಕ್ರೂಡ್ರೈವರ್ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಗುರುಗ್ರಾಮದ ನಹರ್ಪುರ್ ರೂಪಾ ಪ್ರದೇಶದಲ್ಲಿ ನಡೆದಿದೆ.

28 ವರ್ಷದ ಯುವತಿ ತನ್ನ ಲಿವ್ ಇನ್ ಗೆಳೆಯನಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾಳೆ. ಆರೋಪಿ ಸ್ಥಾನದಲ್ಲಿರುವ ಉತ್ತರಪ್ರದೇಶದ ನಿವಾಸಿ ಶಿವಂ ಮತ್ತು ಸಂತ್ರಸ್ತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿ ವಾಸಿಸುತ್ತಿದ್ದರು.

ಕಳೆದ ಗುರುವಾರ ಯುವತಿ ಮನೆಗೆ ಬಂದಾಗ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದ್ದರಿಂದ ಯುವಕ ಸ್ಕ್ರೂಡ್ರೈವರ್ನಿಂದ ಕುತ್ತಿಗೆ ಹಾಗೂ ಮುಖದ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಯುವತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆರೋಪಿ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಿವಂ ಮತ್ತು ಯುವತಿ ಕಳೆದ ಒಂದು ವರ್ಷದಿಂದ ಲಿವ್ ಇನ್ನಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಉತ್ತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಶಿವಂ ಮದುವೆಯಾಗುವ ನೆಪದಲ್ಲಿ ಯುವತಿಯನ್ನ ಲೈಂಗಿಕವಾಗಿ ಶೋಷಣೆ ಮಾಡ್ತಿದ್ದ ಎಂದು ಎಸಿಪಿ ವರುಣ್ ದಹಿಯಾ ತಿಳಿಸಿದ್ದಾರೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜವಂಶಸ್ಥ, ಸಂಸದ ಯದುವೀರ್ ಅವರ ಅಜ್ಜ ಮದನ್ ಗೋಪಾಲ್ ಇನ್ನಿಲ್ಲ

ಸಿಎಂ ಕುರ್ಚಿ ರೇಸ್‌ನಲ್ಲಿ ನೀವಿದ್ದೀರಾ ಎಂದಿದ್ದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು

ಇಟಲಿ ಟೆಂಪಲ್ ಸುತ್ತಿ ಕಪ್ಪ ಒಪ್ಪಿಸಿದರೆ ಡಿಕೆ ಶಿವಕುಮಾರ್ ಸಿಎಂ: ಆರ್ ಅಶೋಕ

ಲೋಕಾನುಭವವಿರುವ ಸಿದ್ದರಾಮಯ್ಯರಿಗೆ ಇದು ತಿಳಿದಿಲ್ವ: ತೇಜಸ್ವಿ ಸೂರ್ಯ ಪ್ರಶ್ನೆ

ಕರ್ನಾಟಕದ ಜನತೆಗೆ ಗುಡ್‌ನ್ಯೂಸ್‌, ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ