Select Your Language

Notifications

webdunia
webdunia
webdunia
webdunia

ಸತ್ತ ಮಹಿಳೆ ಅಂತ್ಯಸಂಸ್ಕಾರದಲ್ಲಿ ಎದ್ದು ಬಂದಾಗ.!

ಸತ್ತ ಮಹಿಳೆ ಅಂತ್ಯಸಂಸ್ಕಾರದಲ್ಲಿ ಎದ್ದು ಬಂದಾಗ.!
ಗಾಜಿಯಾಬಾದ್ , ಶುಕ್ರವಾರ, 24 ಜುಲೈ 2015 (21:00 IST)
ಮಹಿಳೆಯೊಬ್ಬಳು ಸತ್ತಳೆಂದು ಭಾವಿಸಿ ಅಂತ್ಯಸಂಸ್ಕಾರ ನಡೆಸಲು ಸಿದ್ದತೆ ನಡೆಸುತ್ತಿರುವ ಸಂದರ್ಭದಲ್ಲಿ ಆಕೆ ಎದ್ದು ಬಂದ ಘಟನೆ ವರದಿಯಾಗಿದೆ.
 
ಕಳೆದ ಬುಧವಾರದಂದು 65 ವರ್ಷ ವಯಸ್ಸಿನ ಗೋಮತಿ ಎನ್ನುವ ಮಹಿಳೆ ಸಾವನ್ನಪ್ಪಿದ್ದಳು. ಆಕೆಯ ಸಾವಿನ ಸುದ್ದಿ ಎಲ್ಲಾ ಕಡೆಗೆ ಹರಡಿ ಪರಿಚಯಸ್ಥರು, ಸಂಬಂಧಿಗಳು ಅಂತ್ಯಸಂಸ್ಕಾರಕ್ಕಾಗಿ ಮನೆಗೆ ಆಗಮಿಸಿದ್ದರು.
 
ಏತನ್ಮಧ್ಯೆ, ಮಹಿಳೆಯ ಅಂತ್ಯಸಂಸ್ಕಾರದ ಸಿದ್ದತೆ ನಡೆಯುತ್ತಿರುವಂತೆ ಇಲ್ಲಾ ನಾನು ಬದುಕಿದ್ದೇನೆ ...ನಾನು ಬದುಕಿದ್ದೇನೆ ಎಂದು ಸತ್ತಳೆಂದು ಭಾವಿಸಿದ್ದ ಮಹಿಳೆ ಕೂಗಿದ್ದಾಳೆ. ಮಹಿಳೆಯ ಕೂಗು ಕೇಳಿದ ಕುಟುಂಬಸ್ಥರು ಆಕೆಯ ಮೇಲೆ ಹೊದಿಸಲಾಗಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಆಕೆ ಉಸಿರಾಡುತ್ತಿರುವುದು ಕಂಡುಬಂದಿದೆ.
 
ಗೋಮತಿ ಸಾಮಾನ್ಯ ಸ್ಥಿತಿಗೆ ಬಂದ ಮೇಲೆ ನೀರು ಕುಡಿದು ತನ್ನ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾಳೆ.
 
ಗೋಮತಿ ಬದುಕಿರುವುದು ಕಂಡು ಕುಟುಂಬದ ಸದಸ್ಯರಿಗೆ ಸಂತಸವಾಗಿದೆ. ಆದರೆ, ಅವರ ಸಂತಸ ಬಹುಕಾಲ ಉಳಿಯಲಿಲ್ಲ. ಕೇವಲ ಒಂದು ಗಂಟೆಯ ನಂತರ ಗೋಮತಿ ಇಹಲೋಕ ತ್ಯಜಿಸಿದ್ದಾಳೆ. 
 
ಮತ್ತೆ ಕಣ್ಣು ತೆರೆಯಬಹುದು ಎನ್ನುವ ನಿರೀಕ್ಷೆಯಿಂದ ತುಂಬಾ ಹೊತ್ತು ಕಾದಿದ್ದಾರೆ. ಆದರೆ. ಗೋಮತಿ ಬರಲಾಗದ ಲೋಕಕ್ಕೆ ಪ್ರಯಾಣಿಸಿದ್ದಳು.
 

Share this Story:

Follow Webdunia kannada