Select Your Language

Notifications

webdunia
webdunia
webdunia
webdunia

ಹೆದ್ದಾರಿಯಲ್ಲಿ ಮತ್ತೆ ಸಾಮೂಹಿಕ ಅತ್ಯಾಚಾರ

ಹೆದ್ದಾರಿಯಲ್ಲಿ ಮತ್ತೆ ಸಾಮೂಹಿಕ ಅತ್ಯಾಚಾರ
ಲಕ್ನೋ , ಬುಧವಾರ, 3 ಆಗಸ್ಟ್ 2016 (09:31 IST)
ಉತ್ತರ ಪ್ರದೇಶದ ಬುಲಂದ್ ಶಹರ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 91ರಲ್ಲಿ ತಾಯಿ ಮತ್ತು ಮಗುವಿನ ಮೇಲೆ ಘೋರ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ನಡೆದ ಬೆನ್ನಲ್ಲೇ ಬರೇಲಿ-ದೆಹಲಿ ಹೆದ್ದಾರಿ ಬಳಿ ಮಂಗಳವಾರ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿದೆ.

ಖಾಂಡ್ವಾ ರಸ್ತೆಯಲ್ಲಿರುವ ತನ್ನ ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ಕಾರ್ ಒಂದು ನನ್ನ ಬಳಿ ಬಂದು ನಿಂತಿತು. ಅದರಲ್ಲಿದ್ದ ಇಬ್ಬರು ನನ್ನನ್ನು ಎಳೆದುಕೊಂಡು ಕಾರಿನಲ್ಲಿಯೇ ಅತ್ಯಾಚಾರ ನಡೆಸಿದರು. ಬಳಿಕ ರಸ್ತೆ ಬದಿಯಲ್ಲಿ ಬೀಸಾಡಿ ಹೋದರು ಎಂದು ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

 ತಮ್ಮ ಕುಕೃತ್ಯದ ವಿಡಿಯೋವನ್ನು ಸಹ ಮಾಡಿಕೊಂಡಿದ್ದ ಆರೋಪಿಗಳು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಧೈರ್ಯದಿಂದ ಮುಂದೆ ಬಂದ ಶಿಕ್ಷಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆರೋಪಿಗಳಿಬ್ಬರ ಹೆಸರನ್ನು ಸಹ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ಪ್ರಕರಣವನ್ನು ದಾಖಿಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಸಿ.ಬಿ.ಗಂಜ್ ಪೊಲೀಸ್ ಠಾಣಾ ಇನ್ಸಪೆಕ್ಟರ್ ರಾಕೇಶ್ ಕುಮಾರ್ ಭರವಸೆ ನೀಡಿದ್ದರು.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ ಆರೋಗ್ಯಕ್ಕೆ ಮೋದಿ ಪ್ರಾರ್ಥನೆ