Webdunia - Bharat's app for daily news and videos

Install App

ತಂದೆಯ ಕಾಮಚಟಕ್ಕೆ ಶೀಲ ಕಳೆದುಕೊಂಡ ಪುತ್ರಿ

Webdunia
ಶುಕ್ರವಾರ, 10 ನವೆಂಬರ್ 2023 (10:59 IST)
ಪುತ್ರಿ ಎಲ್ಲಿ ಅನೈತಿಕ ಸಂಬಂಧದ ವಿಷಯ ಬಹಿರಂಗಪಡಿಸುತ್ತಾಳೋ ಎನ್ನುವ ಆತಂಕದಿಂದ ತಂದೆ, ಆಕೆಗೆ ಒಂದು ವರ್ಷಗಳ ಕಾಲ ನಿರಂತರವಾಗಿ ಬೆದರಿಕೆಯೊಡ್ಡಿದ್ದಲ್ಲದೇ ಮನೆಗೆಲಸದಾಳಿನಿಂದ ಕೂಡಾ ಚಿತ್ರಹಿಂಸೆ ಕೊಡಿಸಿದ್ದಾನೆ.  ನಾದಿನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದ ತಂದೆಯನ್ನು ನೋಡಿದ ತಪ್ಪಿಗೆ ಪುತ್ರಿ  ತನ್ನ ಶೀಲವನ್ನು ಕಳೆದುಕೊಳ್ಳಬೇಕಾಯಿತಲ್ಲದೇ ಲೈಂಗಿಕ ಹಿಂಸೆಗೆ ಒಳಗಾದ ಹೇಯ ಘಟನ ದೆಹಲಿಯಲ್ಲಿ ನಡೆದಿದೆ. 
 
ತಂದೆ ತನ್ನ ನಾದಿನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಮನೆಗೆಲಸದಾಳಿನೊಂದಿಗೂ ಅನೈತಿಕ ಸಂಬಂಧ ಹೊಂದಿದ್ದ ಘಟನೆ ನಂತರ ಬಹಿರಂಗವಾಗಿದೆ. ಮನೆಗೆಲಸದಾಳನ್ನು ತಾಯಿಯಂತೆ ಭಾವಿಸದಿದ್ದಲ್ಲಿ ಮುಖದ ಮೇಲೆ ಆಸಿಡ್ ಹಾಕುವುದಾಗಿ ತಂದೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. 
 
ದೆಹಲಿ ನಿವಾಸಿಯಾದ ನಸ್ರಿನ್‌, ತನ್ನ ತಂದೆ ವಸೀಮ್, ದೊಡ್ಡಮ್ಮ ಫಿರ್ದೂಸ್ ಮತ್ತು ಆಕೆಯ ಸಹೋದರ ತನ್ವೀರ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದಾಖಲಿಸಿದ್ದಾಳೆ.  ಪತಿ ವಸೀಮ್‌ನ ಅನೈತಿಕ ಸಂಬಂಧಗಳು ನಿರಂತರವಾಗಿ ಮುಂದುವರಿದಿರುವುದನ್ನು ಕಂಡು ನಸ್ರೀನ್ ತಾಯಿ ಆತನನ್ನು ತೊರೆದು ಹೋಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಒಂದು ವರ್ಷದ ಹಿಂದೆ ನಸ್ರಿನ್ ಮಧ್ಯಾಹ್ನ ಮನೆಗೆ ಅಕಸ್ಮಿಕವಾಗಿ ಆಗಮಿಸಿದಾಗ ತಂದೆ ತನ್ನ ಸಹೋದರನ ಪತ್ನಿಯೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದಾಳೆ.   
 
ಕೂಡಲೇ ಕೋಣೆಯಿಂದ ಹೊರಗೆ ಹೋಗಬೇಕು ಎಂದು ಹೊರಟಿದ್ದಾಗ ತಂದೆ, ನನ್ನನ್ನು ಗಟ್ಟಿಯಾಗಿ ಹಿಡಿದು ವಿಷಯವನ್ನು ನಿನ್ನ ತಾಯಿಗೆ ತಿಳಿಸಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ತನಗೆ ಮತ್ತು ತನ್ನ ತಾಯಿಯ ಮೇಲೆ ಹಲ್ಲೆ ನಡೆಯಬಹುದು ಎನ್ನುವ ಆತಂಕದಿಂದ ನಸ್ರಿನ್ ಘಟನೆಯ ಬಗ್ಗೆ ಯಾರ ಬಳಿಯೂ ಹೇಳದೆ ಮೌನವಾಗಿದ್ದಾಳೆ.
 
ನನ್ನ ತಂದೆ ಒತ್ತಾಯಪೂರ್ವಕವಾಗಿ ನಾದಿನಿಯೊಂದಿಗೆ ನಡೆಸುತ್ತಿರುವ ಸೆಕ್ಸ್ ಕೃತ್ಯವನ್ನು ನೋಡುವಂತೆ ನನಗೆ ಒತ್ತಾಯಿಸುತ್ತಿದ್ದ. ನನ್ನ ಮೇಲೆ ಕೂಡಾ ಅನೇಕ ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ನಾನು ಬಾತ್‌ರೂಮ್‌ನಲ್ಲಿದ್ದಾಗ ಮತ್ತೆ ಬಟ್ಟೆಗಳನ್ನು ಬದಲಿಸುವಾಗ ಕೂಡಾ ನನ್ನ ತಂದೆ ನನ್ನೆದುರಿಗೆ ನಿಲ್ಲುತ್ತಿದ್ದರು ಎಂದು ತನ್ನ ಅಸಹಾಯಕತೆಯನ್ನು ಬಹಿರಂಗಪಡಿಸಿದ್ದಾಳೆ.
 
ತಂದೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮುಚ್ಚಿಡಲು ದೊಡ್ಡಮ್ಮ ತನ್ನ ಸಹೋದರನಿಗೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಚೋದಿಸುತ್ತಿದ್ದಳು. ಆತ ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾಳೆ.
 
ತಂದೆ, ದೊಡ್ಡಮ್ಮ ಮತ್ತು ಆಕೆಯ ಸಹೋದರ ನಿರಂತರ ಕಾಟದಿಂದ ಬೇಸತ್ತ ನಸ್ರೀನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಡಿಗೇಶಿ ಬಳಿ 19 ನವಿಲುಗಳ ಸಾವು: ಎಚ್ಚೆತ್ತ ಸರ್ಕಾರದಿಂದ ದಿಟ್ಟ ನಿರ್ಧಾರ

ಟೆಸ್ಟ್‌ನಲ್ಲಿ ತುಂಬಾ ಮಿಸ್ ಮಾಡಿಕೊಂಡಿದ್ದೇನೆ, ವಿರಾಟ್‌ ದೇಶಕ್ಕೆ ನಿಮ್ಮ ಅವಶ್ಯಕತೆಯಿದೆ: ಶಶಿ ತರೂರ್ ಪೋಸ್ಟ್‌

ನೇಹಾ ಹಿರೇಮಠ ಹತ್ಯೆ ಸಂಬಂಧ: ಆರೋಪಿಗೆ ಫಯಾಜ್ ಬಿಗ್ ಶಾಕ್

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌

ಮೈಸೂರಿನತ್ತ ಹೆಜ್ಜೆ ಹಾಕಿದ ಅಭಿಮನ್ಯ ನೇತೃತ್ವದ 9 ಗಜಪಡೆ

ಮುಂದಿನ ಸುದ್ದಿ