Select Your Language

Notifications

webdunia
webdunia
webdunia
webdunia

ಡೇಟಿಂಗ್ ಮಾಡಲು ಹೋಗಿ ನಾಲ್ವರಿಂದ ಗ್ಯಾಂಗ್‌ರೇಪ್‌ಗೊಳಗಾದ ಬಾಲಕಿ

ಡೇಟಿಂಗ್ ಮಾಡಲು ಹೋಗಿ ನಾಲ್ವರಿಂದ ಗ್ಯಾಂಗ್‌ರೇಪ್‌ಗೊಳಗಾದ ಬಾಲಕಿ
ಕವಾರ್ದಾ(ಚತ್ತೀಸ್‌ಗಢ್) , ಗುರುವಾರ, 3 ಸೆಪ್ಟಂಬರ್ 2015 (17:27 IST)
ಅಪ್ರಾಪ್ತ ಬಾಲಕಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ವರದಿಯಾಗಿದೆ. 
 
ಸಹಪಾಠಿಯೊಂದಿಗೆ ಡೇಟಿಂಗ್ ಮಾಡುವ ಕನಸು ವಿಫಲವಾಗಿದ್ದರಿಂದ ಬಾಲಕಿ, ರಾತ್ರಿ ಹೊತ್ತಿನಲ್ಲಿ ಬಸ್‌ಗಾಗಿ ಕಾಯುತ್ತಿರುವಾಗ ನಾಲ್ಕು ಮಂದಿ ಆರೋಪಿಗಳು ಆಕೆಗೆ ಡ್ರಾಪ್ ಕೊಡುವುದಾಗಿ ಫುಸಲಾಯಿಸಿ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. 
 
ನಾಲ್ಕು ಮಂದಿ ಆರೋಪಿಗಳು ರಾತ್ರಿಪೂರ್ತಿ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಬೆಳಗಾಗುತ್ತಿದ್ದಂತೆ ಆರೋಪಿಗಳು ಬಾಲಕಿಯನ್ನು ಮನೆಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮನೆಗೆ ವಾಪಸ್ಸಾದ ಬಾಲಕಿ ಪೊಲೀಸ್ ಠಾಣೆಗೆ ತೆರಳಿ ನಾಲ್ಕು ಮಂದಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
 
ತಾನೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ಡೇಟಿಂಗ್‌ಗೆ ತೆರಳಲು ಬಯಸಿದ್ದೆ. ಆದರೆ ಯುವಕ ಸರಿಯಾದ ಸಮಯಕ್ಕೆ ಬಾರದಿರುವುದರಿಂದ ನಾನು ರಾತ್ರಿ ಹೊತ್ತು ಬಸ್ ನಿಲ್ದಾಣದಲ್ಲಿ ಕಾಯಬೇಕಾಗಿ ಬಂತು ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. 

Share this Story:

Follow Webdunia kannada