Select Your Language

Notifications

webdunia
webdunia
webdunia
webdunia

ಭಾರತ್ ಮಾತಾ ಕಿ ಜೈ ಮಂತ್ರ ಘೋಷದ ವಿರುದ್ಧ ದರುಲ್ ಉಲೂಮ್ ಫತ್ವಾ

ಭಾರತ್ ಮಾತಾ ಕಿ ಜೈ ಮಂತ್ರ ಘೋಷದ ವಿರುದ್ಧ ದರುಲ್ ಉಲೂಮ್  ಫತ್ವಾ
ದಿಯಾಬಂದ್: , ಶುಕ್ರವಾರ, 1 ಏಪ್ರಿಲ್ 2016 (19:21 IST)
ಹಿಂದು ಪರ ಸಂಘಟನೆಗಳು ಭಾರತ್ ಮಾತಾ ಕಿ ಜೈ ಮಂತ್ರ ಘೋಷಿಸುವಂತೆ ಒತ್ತಾಯಿಸಿದರೆ, ಇಸ್ಲಾಮಿಕ್ ಶಿಕ್ಷಣ ಶಾಲೆ ದರುಲ್ ಉಲೂಮ್ ದಿಯೋಬಂದ್ ಶುಕ್ರವಾರ ಫತ್ವಾವೊಂದನ್ನು ಬಿಡುಗಡೆ ಮಾಡಿ, ಭಾರತ್ ಮಾತಾ ಕಿ ಜೈ ಘೋಷವನ್ನು ಪಠಿಸಬೇಡಿ, ಅದು ಇಸ್ಲಾಮಿಕ್ ವಿರೋಧಿ ಎಂದು ಮುಸ್ಲಿಮ್ ಸಮುದಾಯದ ಜನರಿಗೆ ಒತ್ತಾಯಿಸಿದ್ದಾರೆ.
 
ಇಸ್ಲಾಂನಲ್ಲಿ ಕೇವಲ ಒಂದು ದೇವರು ಮಾತ್ರವಿದ್ದು, ಭಾರತ್ ಮಾತಾ ಕಿ ಜೈ ಪಠಿಸುವುದಕ್ಕೆ ನಿರ್ಬಂಧಿಸುವುದಾಗಿ ಇಸ್ಲಾಮಿಕ್ ಸೆಮಿನರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 
ನಾವು ದೇಶವನ್ನು ಪ್ರೀತಿಸುತ್ತೇವೆ. ಆದರೆ ನಾವು ಏಕಮಾತ್ರ ದೇವರಲ್ಲಿ ಮಾತ್ರ ನಂಬಿಕೆ ಇರಿಸಿದ್ದೇನೆ ಎಂದು ದರುಲ್ ಉಲೂಮ್ ದಿಯೋಬಂದ್ ತಿಳಿಸಿದ್ದು,  ಭಾರತ್  ಮಾತಾ ಕಿ ಜೈ ಘೋಷವನ್ನು ಉಚ್ಚರಿಸಬೇಕೋ ಬೇಡವೋ ಎಂಬ ಚರ್ಚೆ ಕಾವು ಪಡೆಯುತ್ತಿರುವ ನಡುವೆ ಅದಕ್ಕೆ ಪ್ರತಿಕ್ರಿಯಿಸುವಂತೆ ಕೇಳಿದಾಗ ಉತ್ತರಿಸಿದೆ. 
 
ಆದರೆ ಅಚ್ಚರಿಯೇನೆಂದರೆ ದರುಲ್ ಉಲೂಮ್ ದಿಯೋಬಂದ್ ಇತ್ತೀಚೆಗೆ ಡಿಕ್ರಿಯೊಂದನ್ನು  ಹೊರಡಿಸಿ, ಮುಸ್ಲಿಮರು ತಮ್ಮ ಮನೆಗಳ ಮೇಲೆ ಮತ್ತು ಅಂಗಡಿ, ಮುಂಗಟ್ಟುಗಳ ಮೇಲೆ  ಸ್ವಾತಂತ್ರ್ಯದಿನದಂದು ತ್ರಿವರ್ಣ ಧ್ವಜ ಹಾರಿಸಬೇಕೆಂದು ತಿಳಿಸಿತ್ತು. ದೇಶಭಕ್ತಿಯ ಶ್ರೇಷ್ಠ ಮನೋಭಾವದೊಂದಿಗೆ ಈ ಸಂದರ್ಭವನ್ನು ಆಚರಿಸಬೇಕೆಂದು ಅದು ತಿಳಿಸಿತ್ತು.
 
ಸೆಮಿನರಿಯ ವಕ್ತಾರ ಅಶ್ರಫ್ ಉಸ್ಮಾನಿ , ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ದರುಲ್ ಉಲೂಮ್ ಉಲೇಮಾಗಳು ಪ್ರಮುಖ ಪಾತ್ರ ವಹಿಸಿದ್ದಾರೆಂದು ತಿಳಿಸಿದ್ದಾರೆ. 
ಸಂಪೂರ್ಣ ಸ್ವಾತಂತ್ರ್ಯಕ್ಕೆ ದರೂಲ್ ಉಲೂಮ್ ಕರೆ ನೀಡಿದ ಬಳಿಕ ಅದು ಪೂರ್ಣ ಸ್ವರಾಜ್ ಚಳವಳಿಗೆ ತಿರುಗಿತು ಎಂದು ಹೇಳಿದರು. 

Share this Story:

Follow Webdunia kannada