Webdunia - Bharat's app for daily news and videos

Install App

ಗುಜರಾತ್‌ ರಾಜ್ಯಾದ್ಯಂತ ದಲಿತರ ಭಾರಿ ಪ್ರತಿಭಟನೆ: ಪೊಲೀಸ್ ಪೇದೆಯ ಹತ್ಯೆ

Webdunia
ಬುಧವಾರ, 20 ಜುಲೈ 2016 (14:48 IST)
ದಲಿತ ಯುವಕರ ಮೇಲೆ ನಡೆದ ದೌರ್ಜನ್ಯ ಘಟನೆ ವಿರೋಧಿಸಿ ದಲಿತ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆಯ ಕಾವು ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ಅಹ್ಮದಾಬಾದ್‌ನಲ್ಲಿ ದಲಿತರ ಪ್ರತಿಭಟನೆ ಸಂದರ್ಭದಲ್ಲಿ ಕಲ್ಲು ತೂರಾಟದಲ್ಲಿ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 
 
ಕಳೆದ ಜುಲೈ 11 ರಂದು ಗಿರ್-ಸೋಮನಾಥ್ ಜಿಲ್ಲೆಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಕೆಲ ಯುವಕರು ದಲಿತ ಸಮುದಾಯದ ಕೆಲ ಯುವಕರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ದಲಿತ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. 
 
ಅಮ್ರೇಲಿ ಪಟ್ಟಣದಲ್ಲಿ ದಲಿತ ಸಮುದಾಯದವರು ಕಲ್ಲು ತೂರಾಟ ನಡೆಸಿದಾಗ ಸ್ಥಳೀಯ ಪೊಲೀಸ್ ಅಪರಾಧ ದಳ ವಿಭಾಗದ ಪೊಲೀಸ್ ಪೇದೆ ಪಂಕಜ್ ಅಮ್ರೇಲಿ ಸಾವನ್ನಪ್ಪಿದ್ದಾರೆ. ಇತರ 10 ಜನರು ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  
 
ಕಳೆದ ಮಂಗಳವಾರದಂದು ಜುನಾಗಢ್ ಜಿಲ್ಲೆಯ ಬಾಟ್ವಾ ಪಟ್ಟಣದಲ್ಲಿ ಮೂವರು ದಲಿತ ಯುವಕರು ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನ ನಡೆಸಿದ ಘಟನೆ ವರದಿಯಾಗಿದೆ.
 
ರಾಜಕೋಟ್ ಜಿಲ್ಲೆಯ ಗೊಂಡಾಲ್ ಮತ್ತು ಜಮಕನಡೊರ್ನಾ ನಗರಗಳಲ್ಲಿ ಏಳು ಮಂದಿ ದಲಿತ ಯುವಕರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ದಲಿತ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಲ್ಲದೇ ಹಲವಾರು ಸರಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿರುವ ನೂರಾರು ದಲಿತ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗರ್ಲ್ ಫ್ರೆಂಡ್ ಜೊತೆ ಸುಮ್ನೆ ಸಿನಿಮಾ ನೋಡೋದು ಬಿಟ್ಟು ಈ ಕೆಲಸ ಮಾಡಿದ್ದಕ್ಕೆ ಯುವಕನಿಗೆ ಥಿಯೇಟರ್ ನಲ್ಲಿ ಬಿತ್ತು ಗೂಸಾ Video

Karnataka Weather:ರಾಜ್ಯದಲ್ಲಿ ಈ ವಾರ ಎಲ್ಲೆಲ್ಲಿ ಮಳೆಯಾಗಲಿದೆ, ಇಲ್ಲಿದೆ ವಾರದ ಹವಾಮಾನ ವರದಿ

13ರಂದು ಕರ್ನಾಟಕ ಬಂದ್ ಮಾಡಿಯೇ ಸಿದ್ದ: ಹೋರಾಟದಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದ ವಾಟಾಳ್

ಕಾವೇರಿ ನೀರು ಹಂಚಿಕೆ ವಿವಾದ: ವಿಜಯ್‌ಗೆ ಮಹತ್ವದ ಪತ್ರ ಬರೆದ ಬಿವೈ ವಿಜಯೇಂದ್ರ

ವರುಣಾರ್ಭಟ ನಡುವೆ ಮುಂದಿನ ನಾಲ್ಕು ದಿನ ಉಡುಪಿಯಲ್ಲಿ ಹೇಗಿರಲಿದೆ ಗೊತ್ತಾ ಹವಾಮಾನ

ಮುಂದಿನ ಸುದ್ದಿ
Show comments