Webdunia - Bharat's app for daily news and videos

Install App

ಸಿಆರ್`ಪಿಎಫ್ ಯೋಧರ ಸ್ವಯಂ ನಿವೃತ್ತಿ ಪ್ರಮಾಣ 4-5 ಪಟ್ಟು ಹೆಚ್ಚಳ

Webdunia
ಗುರುವಾರ, 30 ಮಾರ್ಚ್ 2017 (09:19 IST)
ಕಳೆದ ವರ್ಷಗಳಿಗೆ ಹೋಲಿಸಿದರೆ 2016-17ನೇ ಸಾಲಿನಲ್ಲಿ ಸಿಆರ್`ಪಿಎಫ್ ಸೇರಿದಂತೆ ಭದ್ರತಾ ಪಡೆಗಳ ಸ್ವಯಂ ನಿವೃತ್ತಿ ಪ್ರಮಾಣ 4-5 ಪಟ್ಟು ಹೆಚ್ಚಿರುವುದಾಗಿ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು, ಲೋಕಸಭೆಗೆ ಲಿಖಿತ ಮಾಹಿತಿ ನೀಡಿದ್ದು, ವೈಯಕ್ತಿಕ ಮತ್ತು ಕುಟುಂಬದ ಕಾರಣಗಳಿಂದಾಗಿ ವಿಆರ್`ಸ್ ಪ್ರಮಾಣ ಹೆಚ್ಚಿದೆ. ವಿಆರ್`ಎಸ್ ಮೂಲಭೂತವಾಗಿ ವೈಯಕ್ತಿಕ ಆಯ್ಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಚಿವರು ನೀಡಿದ ಅಂಕಿ ಅಂಶದ ಪ್ರಕಾರ 2016-17ರಲ್ಲೇ ಸಿಆರ್`ಪಿಎಫ್, ಬಿಎಸ್ಎಫ್, ಐಟಿಬಿಪಿ, ಸಿಐಎಸ್ಎಫ್, ಎಸ್ಎಸ್ಬಿ ಮತ್ತು ಅಸ್ಸಾಂ ರೈಫಲ್ಸ್ ಸೇರಿ ಗರಿಷ್ಠ ಪ್ರಮಾಣದಲ್ಲಿ 9,065 ಯೋಧರು ವಿಆರ್`ಎಸ್ ಪಡೆದಿದ್ದಾರೆ. .2014-15ರಲ್ಲಿ 5,289 ಮತ್ತು 2015-16ರಲ್ಲಿ ಕನಿಷ್ಠ 2,105 ಯೋಧರು ವಿಆರ್`ಎಸ್ ಪಡೆದಿದ್ದರು.

ವಿಆರ್ ಎಸ್ ಪಡೆಯುವ ವೇಳೆ ಈ ಯೋಧರು ಕೌಟುಂಬಿಕ, ರಜೆ ಸಮಸ್ಯೆ, ವೃತ್ತಿಯ ನಿಶ್ಚಲತೆ, ಸಮಾನ ವೇತನ ಕೊರತೆ ಮತ್ತು ಕಷ್ಟದ ಕೆಲಸದ ಕಾರಣ ನೀಡಿ ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments