Webdunia - Bharat's app for daily news and videos

Install App

ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವಿದ್ಯಾರ್ಥಿಯ ಬಂಧನ

Webdunia
ಮಂಗಳವಾರ, 8 ಜುಲೈ 2014 (17:12 IST)
ಎಮ್‌ಬಿಎ ವಿಧ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಅಶ್ಲೀಲ ವಿಡಿಯೋ ತಗೆದು ಅವಳನ್ನು ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದ ಇಂದೋರಿನ ಇಂಜಿನಿಯರಿಂಗ್‌ ಓದುತ್ತಿರುವ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
 
ಉಮರಿಯಾದ ವಾಸಿಯಾದ 22 ವರ್ಷದ ವಿಧ್ಯಾರ್ಥಿ ರೇಖಾ (ಹೆಸರು ಬದಲಾಯಿಸಲಾಗಿದೆ)ಗೆ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿರುವ ಬಾಲಾಘಾಟ್‌‌ದ ನಿವಾಸಿ ಆಯುಶ್ಯ ಮರ್ಸಕೊಲೆ ವಿರುದ್ಧ ಬಲಾತ್ಕಾರ ಮತ್ತು ಇತರ ಪ್ರಕರಣಗಳನ್ನು ದಾಖಲಾಗಿದೆ. ಎಂದು ತುಕೊಗಂಜ್ ಪೋಲಿಸ್ ಠಾಣೆಯ ಪ್ರಭಾರಿ ಕೆಎಲ್‌ ದಾಂಗಿ ತಿಳಿಸಿದ್ದಾರೆ. 
  
ಆಯುಶ್ಯ ಈ ವಿದ್ಯಾರ್ಥಿನಿಯ ಜೊತೆಗೆ 2012ರಲ್ಲಿ ಸ್ನೇಹ ಹೊಂದಿದ್ದರು. ಆಕೆಗೆ ನೌಕರಿ ಕೊಡಿಸುವ ಆಮೀಷವೊಡ್ಡಿ ವಲ್ಲಭ ನಗರದಲ್ಲಿರುವ ತನ್ನ ಮನೆಗೆ ಕರೆದಿದ್ದನು ಎಂದು ಯುವತಿ ಆರೋಪಿಸಿದ್ದಾಳೆ. 
 
ಪೋಲಿಸರ ಪ್ರಕಾರ ಆರೋಪಿ ಕೋಲ್ಡ್‌‌ ಡ್ರಿಂಕ್‌‌‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅವಳ ಮೇಲೆ ಅತ್ಯಾಚಾರವೆಸಗಿ ಅಶ್ಲೀಲ ವಿಡಿಯೋ ಕೂಡ ಮಾಡಿದ್ದಾನೆ.  ಈ ಅಶ್ಲೀಲ ವಿಡಿಯೋದಿಂದ ಆತ ಯುವತಿಗೆ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದನು. ಆಗ ಆಕೆ ವಿರೋಧ ವ್ಯಕ್ತ ಪಡಿಸಿದಾಗ ವಿಡಿಯೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್‌ ಮಾಡುವುದಾಗಿ ಹೆದರಿಸಿದ್ದ. ನೊಂದ ಯುವತಿ ಪೋಲಿಸರಿಗೆ ಈ ವಿಷಯವನ್ನು ತಿಳಿಸಿ ದೂರು ದಾಖಲಿಸಿದ್ದಾಳೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments