Webdunia - Bharat's app for daily news and videos

Install App

ಮುಸ್ಲಿಂ ಯುವತಿಗೆ ಪ್ರೀತಿ ಮಾಡಿದಕ್ಕಾಗಿ ಪಾದ್ರಿಗೆ ಹುಚ್ಚಾಸ್ಪತ್ರೆಗೆ ಕಳುಹಿಸಲಾಗಿದೆ

Webdunia
ಶನಿವಾರ, 26 ಜುಲೈ 2014 (18:09 IST)
ಕೇರಳದ ಒಬ್ಬ 29 ವರ್ಷದ ಕ್ಯಾಥೋಲಿಕ್ ಪಾರ್ದಿಯನ್ನು ಒತ್ತಾಯ ಪೂರ್ವಕವಾಗಿ ಈತನ ಕುಟುಂಬದವರು ಹುಚ್ಚಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪರಿವಾರದವರ ಪ್ರಕಾರ ಈತ ವಿಶ್ವಾಸ ರಹಿತನಾಗಿದ್ದಾನೆ ಮತ್ತು ವಿಚಿತ್ರ ವರ್ತನೆ ಮಾಡುತ್ತಿರುವ ಕಾರಣ ಹುಚ್ಚಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಇತನಿಗೆ ಮಾನಸಿಕ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.ಆದರೆ, ಆಂಗ್ಲ ಪತ್ರಿಕೆ ವರದಿ ಪ್ರಕಾರ ಪಾರ್ದಿ ಮುಸಲ್ಮಾನ ಯುವತಿಯೊಂದಿಗೆ ಲವ್ವಿ ಡವ್ವಿ ನಡೆಸುತ್ತಿದ್ದನು ಎನ್ನಲಾಗಿದೆ.
 
ಮುಸ್ಲಿಮ್‌ ಯುವತಿ ಎರಡು ವರ್ಷ ಮೊದಲೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಳು. ಅವಳು ಪಾರ್ದಿ ಜೊತೆಗೆ ಮದುವೆಯಾಗಲು ಬಯಸಿದ್ದಳು. ಪಾರ್ದಿಯ  22 ವರ್ಷದ ಗರ್ಲ್‌ಫ್ರೆಂಡ್‌‌ ಸುರೂಮಿ ಆಸ್ಪತ್ರೆಗೆ ಹೋಗಿ ವಿರೋಧ ವ್ಯಕ್ತ ಪಡಿಸಿದಾಗ ಆಸ್ಪತ್ರೆಯಿಂದ ಪಾರ್ದಿಯನ್ನು ಬಿಡುಗಡೆ ಗೊಳಿಸಲಾಯಿತು. ಪಾರ್ದಿ ವರ್ಗೀಜ್ ಜೈನ್ ಕ್ಯಾಥೋಲಿಕ್ ಕಾಂಗ್ರೆಗೆಶನ್ ರೊಗೆಶನಲಿಸ್ಟಸ್‌ ಸದಸ್ಯರಾಗಿದ್ದಾರೆ. 
 
 ಆಗ ಇವರಿವಬ್ಬರು  ರಿಜಿಸ್ಟರ್‌ ಆಫೀಸ್‌‌ನಲ್ಲಿ ಮ್ಯಾರೇಜ್‌ ಆಫೀಸರ್‌‌ಗೆ ಸಂಪರ್ಕ ಮಾಡಿದ್ದರು. ಕಳೆದ ವಾರ ವರ್ಗೀಸ್‌ ರೆಜಿಸ್ಟೆರ್ ಕಚೇರಿಗೆ ಸಂಪರ್ಕ ಮಾಡಿದಾಗ ವೈಕೊಮ್‌‌‌ನಲ್ಲಿ ಪಾರ್ದಿಯ  ಪರಿವಾರ ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಯಿತು. 
 
 ಕಳೆದ ವಾರ ವರ್ಗೀಸ್‌ ಮದುವೆಗಾಗಿ ಮೇ 31 ರಂದು ಕೊಚ್ಚಿ ರಿಜಿಸ್ಟರ್ ಕಚೇರಿಗೆ ಸಂಪರ್ಕ ಮಾಡಿ ವಿವಾಹಕ್ಕಾಗಿ ನೋಂದಣಿ ಮಾಡಿದ್ದರು.ಆದರೆ, ಕುಟುಂಬದ ಸದಸ್ಯರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವೈವಾಹಿಕ ನೋಂದಣಿ ಅಧಿಕಾರಿ ಹೇಳಿಕೆ ನೀಡಿದ ನಂತರ ವರ್ಗೀಜ್ ಮತ್ತು ಸುರೂಮಿಗೆ ಕೊಟ್ಟಾಯಂ ಮತ್ತು ಎರ್ನಾಕುಲಂ ನಿಂದಲೇ ತೊಂದರೆ ಪ್ರಾರಂಭವಾಗಿತ್ತು.  
 
ತಾನು ಹುಚ್ಚನಲ್ಲ ಎಂದು ವರ್ಗೀಜ್ ತಿಳಿಸಿದ್ದಾನೆ. ಪರಿವಾರದವರು ಮದುವೆಯನ್ನು ಏಕೆ ವಿರೋಧ ಮಾಡುತ್ತಿದ್ದಾರೆ ಎಂದು ಕೇಳಲು ಮನೆಗೆ ಬಂದೆ ಆದರೆ ನನ್ನ ತಾಯಿ-ತಂದೆ ಮತ್ತು ಸಂಬಂಧಿಕರು ಮದುವೆಯನ್ನು ವಿರೋಧಿಸಿದರು ಎಂದು ವರ್ಗೀಸ ತಿಳಿಸಿದ್ದಾನೆ.
  
ನನ್ನನ್ನು ಪಾದ್ರಿ ರೂಪದಲ್ಲಿ ನೋಡಲು ಅವರು ಬಯಸುತ್ತಾರೆಂದು ತಿಳಿಸಿದ್ದಾರೆ. ನಾನು ಸುರೂಮಿ ಜೊತೆಗೆ ಸಂಬಂಧ ಹೊಂದಿದ್ದರಿಂದ ಪಾದ್ರಿ ರೂಪದಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಿರುವುದಿಲ್ಲ. ಎಂದು ವರ್ಗೀಸ್ ತಿಳಿಸಿದ್ದಾನೆ. ಕಳೆದ ವರ್ಷ ವರ್ಗೀಸ್‌ಗೆ ವಿಧಿವತ್ತಾದ ರೂಪದಲ್ಲಿ ಪಾದ್ರಿಯನ್ನಾಗಿ ಮಾಡಲಾಗಿತ್ತು. 
 
ಕುಟುಂಬದವರು ವರ್ಗೀಸ್‌ನನ್ನು ಥೋಡುಪುಝಾದಿಂದ ದಿ ಹಾರ್ಟ್ ಮೆಂಟಲ್‌ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದಾರೆ. ಇತನ ವಿರೋದಧ ನಡುವೆಯೂ ಕೂಡ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಗಿದೆ. ಆ ದಿನ ಸುರೂಮಿ ಹಲವು ಬಾರಿ ವರ್ಗೀಸ್‌‌ಗೆ ಸಂಪರ್ಕ ಮಾಡಲು ಪ್ರಯತ್ನ ಪಟ್ಟಿದ್ದಾಳೆ. ಸಂಪರ್ಕಕ್ಕೆ ಸಿಗದ ವೇಳೆಯಲ್ಲಿ ಆಕೆ ಪೋಲಿಸರಿಗೆ ದೂರು ಸಲ್ಲಿಸಿದ್ದಾಳೆ. ನಂತರ ವರ್ಗೀಸನನ್ನು ಮೆಂಟಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೋಲಿಸರಿಗೆ ಗೊತ್ತಾಗಿದೆ.ಆರು  ತಿಂಗಳು ಹಿಂದೆ ಪ್ರಾರ್ಥನೆ ವೇಳೆಯಲ್ಲಿ ಸುರೂಮಿ, ವರ್ಗೀಸ್‌‌ನನ್ನು ಬೇಟಿಯಾಗಿದ್ದಳು. ಆಗ ಇವರಿಬ್ಬರ ನಡುವೆ ಪ್ರೇಮ ಉಂಟಾಗಿತ್ತು. 
 
ಇದರ ನಂತರ ಆಸ್ಪತ್ರೆ ಆಡಳಿತ ಮಂಡಳಿ ವರ್ಗೀಸನನ್ನು ಮನೆಗೆ ಕಳುಹಿಸಲು ಪೋಲಿಸರ ಸಹಾಯ ಕೇಳಿದರು. ಇದರ ನಂತರ ವರ್ಗೀಸ್ ಸಾಮಾನ್ಯ ಆಸ್ಪತ್ರೆಯಲ್ಲಿ ದಾಖಲಾದನು. 
 
ಮೆಂಟಲ್‌ ಆಸ್ಪತ್ರೆಯಲ್ಲಿ ತಮ್ಮನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿಡಲಾಗಿತ್ತು ಎಂದು ವರ್ಗಿಸ್ ಆರೋಪಿಸಿದ್ದಾನೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments