Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ 23 ವರ್ಷದ ವಿವಾಹಿತೆಯ ಮೇಲೆ ಗ್ಯಾಂಗ್ ರೇಪ್

ದೆಹಲಿಯಲ್ಲಿ 23 ವರ್ಷದ ವಿವಾಹಿತೆಯ ಮೇಲೆ ಗ್ಯಾಂಗ್ ರೇಪ್
ನವದೆಹಲಿ , ಶುಕ್ರವಾರ, 25 ಜುಲೈ 2014 (16:04 IST)
ದೆಹಲಿ ದ್ವಾರಕಾ ಪ್ರದೇಶದಲ್ಲಿ ಮಧ್ಯರಾತ್ರಿ ಸುಮಾರಿಗೆ ಮೂವರು ಆರೋಪಿಗಳು 23 ವರ್ಷದ ವಿವಾಹಿತ ಮಹಿಳೆಗೆ ರಿವಾಲ್ವರ್‌ ತೋರಿಸಿ ಆಕೆಯನ್ನು ಅಪಹರಿಸಿ ಚಲಿಸುವ ವಾಹನದಲ್ಲಿಯೇ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ  ದರೋಡೆ ಮಾಡಿದ ಹೇಯ ಪ್ರಕರಣ ವರದಿಯಾಗಿದೆ.  
 
ಗುರ್ಗಾಂವ್‌ನ ಕ್ಲಬ್‌ಗೆ ತೆರಳಿದ್ದ ಮಹಿಳೆ ಮನೆಗೆ ತೆರಳಲು ಯಾರಾದರೂ ಲಿಫ್ಟ್ ಕೊಡುವ ನಿರೀಕ್ಷೆಯಲ್ಲಿ ಕಾದು ನಿಂತಿದ್ದಳು. ಅದೇ ಸಮಯದಲ್ಲಿ ಕಾರಿನಲ್ಲಿ ಆಗಮಿಸಿದ ನಾಲ್ಕು ಮಂದಿ ಆರೋಪಿಗಳು ಲಿಫ್ಟ್ ಕೊಡುವುದಾಗಿ ಹೇಳಿದ್ದರಿಂದ ಕಾರಿನಲ್ಲಿ ತೆರಳಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.   
 
ಕಾರಿನಲ್ಲಿ ಮಹಿಳೆಗೆ ಬಂದೂಕು ತೋರಿಸಿ ನಾಲ್ಕು ಜನರಲ್ಲಿ ಮೂವರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಅವಳಿಂದ 5 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ ಎಂದು ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ.     
 
ಮಹಿಳೆ ಪೊಲೀಸರಿಗೆ ಕರೆ ಮಾಡಿ ಮೂವರು ಆರೋಪಿಗಳು ರಿವಾಲ್ವರ್ ತೋರಿಸಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಕಾರಿನಲ್ಲಿ ತೆರಳುತ್ತಿದ್ದಾಗ ಸಿಎನ್‌ಜಿ ಸ್ಟೇಶನ್‌ನಲ್ಲಿ ಗ್ಯಾಸ್ ಕೂಡಾ ತುಂಬಿಕೊಂಡಿದ್ದರು ಎಂದು ಮಾಹಿತಿ ನೀಡಿದ್ದರಿಂದ ಪೊಲೀಸರು ಸಿಎನ್‌ಜಿ ಸ್ಟೇಶನ್‌ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಲ್ಲದೇ ಆರೋಪಿಗಳ ರೇಖಾಚಿತ್ರ ಸಿದ್ದಪಡಿಸಿ ತನಿಖೆ ಕೈಗೊಂಡಿದ್ದಾರೆ  
 
ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ರೇಪ್‌ಗೊಳಗಾಗಿರುವುದು ಖಚಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada