Select Your Language

Notifications

webdunia
webdunia
webdunia
webdunia

ಕ್ರಿಕೆಟಿಗನ ಮಾಜಿ ಗರ್ಲ್ ಫ್ರೆಂಡ್‌ಳಿಂದ ನಗ್ನ ವಿಡಿಯೋ ಅಪ್ಲೋಡ್

ಕ್ರಿಕೆಟಿಗನ ಮಾಜಿ ಗರ್ಲ್ ಫ್ರೆಂಡ್‌ಳಿಂದ ನಗ್ನ ವಿಡಿಯೋ ಅಪ್ಲೋಡ್
ಮುಂಬೈ , ಭಾನುವಾರ, 1 ಮಾರ್ಚ್ 2015 (12:16 IST)
ರೋಹಿತ್ ಶರ್ಮಾರ ಮಾಜಿ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡು ತಿರುಗಿಯೇ ಸಾಕಷ್ಟು ಫೇಮಸ್ ಆಗಿದ್ದ,  ರಿಯಾಲಿಟಿ ಶೋ ‘ಬಿಗ್ ಬಾಸ್-7’ ರ ಸ್ಪರ್ಧಿಯೂ ಕೂಡ ಆಗಿದ್ದ ಸೋಫಿಯಾ ಹಯಾತ್ ಈಗ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ.
ಬ್ರಿಟಿಷ್-ಇಂಡಿಯನ್ ಮಾಡೆಲ್ ಮತ್ತು ನಟಿ ಸೋಫಿಯಾ ಹಯಾತ್ ಸ್ನಾನ ಮಾಡುವಾಗಿನ ಸೆಲ್ಫಿ ನಗ್ನ ವೀಡಿಯೋವನ್ನು ಟ್ವಿಟರ್ ಮತ್ತು ಇನ್ಸ್ತಾಗ್ರಾಮ್ ಗಳಲ್ಲಿ ಹರಿಯಬಿಟ್ಟಿದ್ದಾಳೆ.
 
ಸೋಫಿಯಾ ಈ ಹಿಂದೆ ಕೂಡಾ  ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಶ್ಲೀಲ ಚಿತ್ರಗಳನ್ನು ಷೇರ್ ಮಾಡಿದ್ದಳು. ಜೊತೆಗೆ 2012ರಲ್ಲಿ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಜೊತೆ ಕೂಡಾ ಈಕೆಯ ಹೆಸರು ತಳಕು ಹಾಕಿಕೊಂಡಿತ್ತು.
 
ಟ್ವೀಟ್ ಮೂಲಕ ಸೋಫಿಯಾ ಈ ವಿಷಯವನ್ನು ಒಪ್ಪಿಕೊಂಡಿದ್ದಳು ಕೂಡಾ. “ನಾನು ಈ  ಗಾಸಿಪ್ಪನ್ನು ಇಲ್ಲಿಗೇ ಕೊನೆಗೊಳಿಸಲು ನಿರ್ಧರಿಸಿದ್ದೇನೆ. ನಾನು ರೋಹಿತ್ ಶರ್ಮಾ ಜೊತೆ ಡೇಟಿಂಗ್ ನಡೆಸಿದ್ದೆ. ಇನ್ನೊಮ್ಮೆ ಅವರ ಜೊತೆ ಡೇಟ್ ಮಾಡುವ ಯಾವುದೇ ಆಸೆಯಿಲ್ಲ. ಈ ಬಾರಿ ಒಬ್ಬ ಸಭ್ಯಸ್ಥನನ್ನು ಹುಡುಕುತ್ತಿದ್ದೇನೆ.” ಎಂದು ರೋಹಿತ್ ಶರ್ಮಾ ಗೆ ಪರೋಕ್ಷವಾಗಿ ಟಾಂಗ್ ಕೂಡಾ ನೀಡಿದ್ದಳು.
 

Share this Story:

Follow Webdunia kannada