Select Your Language

Notifications

webdunia
webdunia
webdunia
webdunia

ಗೋವು ಯಾರ ತಾಯಿಯಲ್ಲ, ಅದೊಂದು ಪ್ರಾಣಿಯಷ್ಟೆ: ಕಾಟ್ಜು

ಗೋವು ಯಾರ ತಾಯಿಯಲ್ಲ, ಅದೊಂದು ಪ್ರಾಣಿಯಷ್ಟೆ: ಕಾಟ್ಜು
ವಾರಣಾಸಿ , ಭಾನುವಾರ, 4 ಅಕ್ಟೋಬರ್ 2015 (11:49 IST)
ದಾದ್ರಿ ಹತ್ಯೆ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಗೋವು ಯಾರ ತಾಯಿಯು ಅಲ್ಲ. ಅದೊಂದು ಕೇವಲ ಪ್ರಾಣಿ ಎಂದು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ್ ಕಾಟ್ಜು ಹೇಳಿದ್ದಾರೆ.
 
ಗೋವು ಒಂದು ಪ್ರಾಣಿಯಾಗಿದ್ದರಿಂದ ಯಾರ ತಾಯಿಯು ಆಗಲು ಸಾಧ್ಯವಿಲ್ಲ. ಒಂದು ವೇಳೆ ನಾನು ಗೋಮಾಂಸ ತಿನ್ನಲು ಬಯಸಿದಲ್ಲಿ ತಪ್ಪೇನು? ವಿಶ್ವದಾದ್ಯಂತ ಜನರು ಗೋಮಾಂಸ ಸೇವನೆ ಮಾಡುತ್ತಾರೆ. ನಾನು ತಿನ್ನಬೇಕು ಎಂದು ಬಯಸಿದಲ್ಲಿ ತಡೆಯಲು ಯಾರಿಂದಲೂ ಸಾಧ್ಯವಾಗದು ಎಂದು ಬನಾರಸ್ ಹಿಂದು ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ ಸಭೆಯಲ್ಲಿ ತಿಳಿಸಿದ್ದಾರೆ.   
 
ನಾನು ಕೂಡಾ ಗೋಮಾಂಸ ತಿನ್ನುತ್ತೇನೆ ಅದರಲ್ಲಿ ಯಾವ ತಪ್ಪಿಲ್ಲ. ಇದೊಂದು ಕೋಮುವಾದ ರಾಜಕಾರಣದ ಹೇಯ ಕೃತ್ಯವಾಗಿದೆ ಎಂದು ಗುಡುಗಿದ್ದಾರೆ.
 
ವಿಶ್ವದಾದ್ಯಂತ ಗೋಮಾಂಸ ತಿನ್ನವವರು ಕೆಟ್ಟ ವ್ಯಕ್ತಿಗಳು. ಗೋಮಾಂಸ ತಿನ್ನದಿರುವ ನಾವುಗಳು ಸಾದು ಸಂತರೇ. ನಾನು ಮುಂಬರುವ ದಿನಗಳಲ್ಲೂ ಕೂಡಾ ಗೋಮಾಂಸ ಸೇವನೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.  
 
ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯಾದ ಕಾಟ್ಜು, ದಾದ್ರಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಹತ್ಯೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada