Webdunia - Bharat's app for daily news and videos

Install App

`ನಿನ್ನ ದಾಖಲೆಗಳು ನಕಲಿ ಎಂದು ಸಾಬೀತಾದರೆ ಜೈಲಿಗೆ ಹಾಕುತ್ತೇವೆ’

Webdunia
ಶನಿವಾರ, 18 ಮಾರ್ಚ್ 2017 (12:40 IST)
ನಾನು ಜಯಲಲಿತಾ ಮತ್ತು ಶೋಭನ್ ಬಾಬು ಪುತ್ರ. ಅಮ್ಮನನ್ನ ಕೊಲೆ ಮಾಡಲಾಗಿದೆ.. ಅಮ್ಮನ ಆಸ್ತಿ ನನಗೇ ಸೇರಬೇಕೆಂದು ಹೇಳಿಕೊಂಡಿದ್ದ 32 ವರ್ಷದ ಕೃಷ್ಣಮೂರ್ತಿ ಎಂಬುವವನಿಗೆ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿದೆ. ಚೆನ್ನೈ ಪೊಲೀಸ್ ಕಮೀಷನರ್ ಎದುರು ತನಿಖೆಗೆ ಹಾಜರಾಗುವಂತೆ ಹೇಳಿರುವ ಕೋರ್ಟ್, ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ಸಾಬೀತಾದರೆ ನಿನ್ನನ್ನ ಜೈಲಿಗಟ್ಟುವುದಾಗಿ ಹೇಳಿದೆ.
 

ನಾನು ದಿವಂಗತ ಜಯಲಲಿತಾ ಮತ್ತು ಶೋಭನ್ ಬಾಬು ಪುತ್ರ. 1986ರಲ್ಲಿ ಈರೋಡ್`ನಲ್ಲಿ ಶೂಟಿಂಗ್ ವೇಳೆ ಜಯಲಲಿತಾ ಅವರನ್ನ ಭೇಟಿಯಾದ ವಸಂತಮಣಿ ಎಂಬುವವರಿಗೆ ನನ್ನನ್ನ ಒಪ್ಪಿಸಲಾಗಿತ್ತು ಎಂದು ಕೋರ್ಟ್ ಮುಂದೆ ಹೇಳಿರುವ ಕೃಷ್ಣಮೂರ್ತಿ, ಎಂಜಿಆರ್ ಸಹಿ ಮಾಡಿದ್ದಾರೆನ್ನಲಾದ ದತ್ತು ಸ್ವೀಕಾರ ಪತ್ರವನ್ನೂ ಕೋರ್ಟ್`ಗೆ ನೀಡಿದ್ದಾನೆ.


ದಾಖಲೆಗಳನ್ನ ಪರಿಶೀಲಿಸಿದ ಜಸ್ಟೀಸ್ ಆರ್. ಮಹದೇವನ್, ಒಬ್ಬ ಎಲ್`ಕೆಜಿ ಹುಡುಗನೂ ಈ ದಾಖಲೆಗಳನ್ನ ನಕಲಿ ಎಂದು ಹೇಳಬಲ್ಲ. ನೀನು ನೀಡಿರುವ ಫೋಟೋ ಸಾರ್ವಜನಿಕವಾಗಿ ಸಿಗುತ್ತದೆ. ಯಾರು ಬೇಕಾದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದುಕೊಂಡಿದ್ದೀಯಾ.. ಕೋರ್ಟ್ ಜೊತೆ ಆಟವಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಹೆಚ್ಚುವರಿ ಸರ್ಕಾರಿ ವಕೀಲರಿಗೆ ದಾಖಲೆಗಳ ಅಸಲಿತನದ ಬಗ್ಗೆ ಪರಿಶೀಲನೆ ನಡೆಸುವಂತೆ ಆದೇಶಿಸಿದೆ.

ಸೆಪ್ಟೆಂಬರ್`ನಲ್ಲಿ ನಾನು ಜಯಲಲಿತಾರನ್ನ ಅವರ ನಿವಾಸದಲ್ಲೇ ಭೇಟಿಯಾಗಿದ್ದೆ. ನನ್ನನ್ನ ಮಗನೆಂದು ಜಗತ್ತಿಗೆ ತಿಳಿಸಲು ಅಮ್ಮ ನಿರ್ಧರಿಸಿದ್ದರು. ಆದರೆ, ಶಶಿಕಲಾ ಇದನ್ನ ವಿರೋಧಿಸಿದ್ದರು. ಬಳಿಕ ಮಾತಿನ ಚಕಮಕಿ ನಡೆದು ಅಮ್ಮನನ್ನ ಮಹಡಿಯಿಂದ ಕೆಳಗೆ ತಳ್ಳಿದ್ದರು ಎಂದು ಕೃಷ್ಣಮೂರ್ತಿ ಹೇಳಿಕೊಂಡಿದ್ದರು.

ಕೃಷ್ಣಮೂರ್ತಿ ಪರವಾಗಿ ಪಿಐಎಲ್ ಸಲ್ಲಿಸಿದ್ದ ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ, ಸತ್ಯ ಹೊರಬರಬೇಕು, ಕೃಷ್ಣಮೂರ್ತಿ ದಾಖಲೆಗಳು ಸುಳ್ಳೆಂದು ಸಾಬೀತಾದರೆ ಕೋರ್ಟ್ ಅವನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನನ್ನಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಕೋರ್ಟ್`ಗೆ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments