ನವದೆಹಲಿ: ಇನ್ನೇನು ಶ್ರಾವಣ ಮಾಸ ಬಂತೆಂದರೆ ಒಂದಾದ ಮೇಲೊಂದರಂತೆ ಹಬ್ಬಗಳೂ ಬರುತ್ತವೆ. ಆದರೆ ಈಗ ಹಬ್ಬಗಳೆಂದರೂ ಜನ ಭಯಬೀಳುವಂತಾಗಿದೆ.
ಹಬ್ಬಗಳೆಂದರೆ ಖರೀದಿ, ನೆಂಟರಿಷ್ಟರ ಮನೆಗೆ ಓಡಾಟ ಹೆಚ್ಚುತ್ತದೆ. ಜೊತೆಗೆ ಜನ ಒಟ್ಟು ಸೇರುವುದನ್ನು ತಡೆಯುವುದೇ ಸರ್ಕಾರಕ್ಕೆ ತಲೆನೋವಾಗುತ್ತದೆ.
ಆದರೆ ಇದೆಲ್ಲದರಿಂದ ಮತ್ತೆ ಕೊರೋನಾ ಹೆಚ್ಚಳವಾಗುವ ಭೀತಿಯಿದೆ. ಕೇರಳದಲ್ಲಿ ಓಣಂ ಹಬ್ಬಕ್ಕೆ ಸರ್ಕಾರ ನಿಯಮ ಸಡಿಲಿಸಿದ ಬೆನ್ನಲ್ಲೇ ಅಲ್ಲಿ ಈಗ ಕೊರೋನಾ ಪ್ರಕರಣಗಳು ದುಪಟ್ಟಾಗಿವೆ. ಕರ್ನಾಟಕದಲ್ಲೂ ಇನ್ನೇನು ಗೌರಿ-ಗಣೇಶ ಹಬ್ಬ ಬರಲಿದ್ದು, ಜನ ಸುರಕ್ಷತೆ ಮರೆತು ಓಡಾಡಿದರೆ ಮತ್ತೆ ಕೊರೋನಾ ಸಂಖ್ಯೆ ಹೆಚ್ಚಳವಾಗಬಹುದು.