Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಮತ್ತೆ ಮೇಲೇಳಲು ಸಾಧ್ಯವಿಲ್ಲ: ಬೇಚಾರಿ ಸೋನಿಯಾ ಕ್ಯಾ ಕರೇಗಿ ಎಂದ ಹಂಸರಾಜ್ ಭಾರಧ್ವಾಜ್

ಕಾಂಗ್ರೆಸ್ ಮತ್ತೆ ಮೇಲೇಳಲು ಸಾಧ್ಯವಿಲ್ಲ: ಬೇಚಾರಿ ಸೋನಿಯಾ ಕ್ಯಾ ಕರೇಗಿ ಎಂದ ಹಂಸರಾಜ್ ಭಾರಧ್ವಾಜ್
ನವದೆಹಲಿ , ಗುರುವಾರ, 26 ಮಾರ್ಚ್ 2015 (19:13 IST)
ಕಾಂಗೆಸ್ ಪಕ್ಷ ಪಾತಾಳದತ್ತ ಜಾರುತ್ತಿದ್ದು ಮತ್ತೆ ಮೇಲೇಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ರಾಜ್ಯಪಾಲ ಎಚ್‌.ಆರ್.ಭಾರಧ್ವಾಜ್ ನೀಡಿರುವ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಕೋಲಾಹಲ ಮೂಡಿಸಿದೆ.

ಕಾಂಗ್ರೆಸ್ ಪಕ್ಷದ ಮಾತುಗಳನ್ನು ಜನ ಕೇಳಲು ಸಿದ್ದರಿಲ್ಲ. ಕಾಂಗ್ರೆಸ್ ಪಾತಾಳಕ್ಕೆ ಕುಸಿಯಲು ಕಾಂಗ್ರೆಸ್ ಪಕ್ಷದ ನಾಯಕರೇ ನೇರ ಹೊಣೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಔರ್ ಮೈ ಉಸ್ ಬೇಚಾರಿ ಕೋ ಕೋಯಿ ದೋಷ್ ನಹಿ ದೇತಾ. ಪಕ್ಷದಲ್ಲಿನ ನಾಯಕರ ಹೇಳಿಕೆಗಳು ಕಾಂಗ್ರೆಸ್ ಪಕ್ಷವನ್ನು ಇನ್ನಿಲ್ಲದಂತೆ ಮಾಡಿವೆ. ಪ್ರಿಯಾಂಕಾ ಗಾಂಧಿಯನ್ನು ಪಕ್ಷಕ್ಕೆ ಕರೆತರದಿರುವುದು ಕೂಡಾ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಬೇಕಾದಲ್ಲಿ ಕಠಿಣ ಪರಿಶ್ರಮಪಡುವುದು ಅಗತ್ಯವಾಗಿದೆ. ಜಾತಿವಾದಿ ಕೋಮುವಾದವನ್ನು ಹೊರತುಪಡಿಸಿ ಜನತೆಯ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ದುಡಿದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ, ಹೊಸತನ ಬರಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿರುವ  ಮೂವರು ಅಥವಾ ನಾಲ್ಕು ಮಂದಿ ನಾಯಕರು ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ನಿರ್ಧರಿಸುತ್ತಾರೆ. ಹಿರಿಯ ಕಾಂಗ್ರೆಸ್ ನಾಯಕರ ಸಲಹೆಗಳನ್ನು ಕೇಳುವವರು ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡುತ್ತದೆ. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದರೂ ಮಾಜಿಯಾಗಿ ಮನೆಯಲ್ಲಿ ಕುಳಿತಿದ್ದಾರೆ. ಪಕ್ಷ ಯಾರೊಬ್ಬರ ಸ್ವತ್ತಲ್ಲ ಎಂದು ಮಾಜಿ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಗುಡುಗಿದ್ದಾರೆ.

Share this Story:

Follow Webdunia kannada