video, ವಂದೇ ಭಾರತ್‌ನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆ, ರೈಲಿನೊಳಗೆ ಜಲಪಾತ ಎಂದ ಕಾಂಗ್ರೆಸ್‌

Sampriya
ಮಂಗಳವಾರ, 24 ಜೂನ್ 2025 (18:36 IST)
Photo Credit X
ನವದೆಹಲಿ: ದೆಹಲಿಗೆ ಹೋಗುವ ವಂದೇ ಭಾರತ್ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವ ವಿಡಿಯೋವೊಂದು ಸಾಮಕಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಾಂಗ್ರೆಸ್ ಸರ್ಕಾರ ಈ ವಿಡಿಯೋವನ್ನು ಹಂಚಿಕೊಂಡು, ವಂದೇ ಭಾರತ್ ರೈಲಿನೊಳಗೆ ಜಲಪಾತ..!
ಮೋದಿ ಸರ್ಕಾರದ ದುರಾಡಳಿತದಲ್ಲಿ ರೈಲ್ವೇ ಇಲಾಖೆಯ ದುಸ್ಥಿತಿ ಎಂದು ಬರೆದುಕೊಂಡಿದೆ.

ರೈಲ್ವೆ ದ್ವಾರದಿಂದ ನೀರು ಹರಿಯುತ್ತಿರುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಈಗ ಅದು ವೈರಲ್ ಆಗಿದೆ.

ಪ್ರಯಾಣಿಕರೊಬ್ಬರು ಪೋಸ್ಟ್‌ನ್ನು ಹಂಚಿ, ವಂದೇಭಾರತ್ ರೈಲಿನಲ್ಲಿ ಎಸಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ನೀರಿನ ಸೋರಿಕೆ. ಪ್ರೀಮಿಯಂ ದರದ ಹೊರತಾಗಿಯೂ ಅತ್ಯಂತ ಅಹಿತಕರ ಪ್ರಯಾಣ. ಹಲವಾರು ದೂರುಗಳನ್ನು ಸಲ್ಲಿಸಲಾಗಿದೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಅದನ್ನು ಪರಿಶೀಲಿಸಿ ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೊವು ಜನರಲ್ಲಿ ರೈಲುಗಳ ನಿರ್ವಹಣೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತು ಮತ್ತು ಅನೇಕರು ಸೇವೆಯನ್ನು ಟೀಕಿಸಿದರು. ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕನು ತನ್ನ ಟಿಕೆಟ್‌ಗೆ ಸಂಪೂರ್ಣ ಮರುಪಾವತಿಗೆ ಒತ್ತಾಯಿಸಿದನು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ಭಯೋತ್ಪಾದನಾ ದಾಳಿ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಹೆದರಿ ನಾಲ್ಕನೇ ಫ್ಲೋರ್‌ನಿಂದ ಹಾರಿದ್ರಾ ಯುವತಿ

ಮಹಿಳೆಯರಿರುವುದು ಗಂಡನ ಜತೆ ಮಲಗುವುದಕ್ಕೆ: ಕೇರಳ ಸಿಪಿಎಂ ಮುಖಂಡನ ವಿವಾದಾತ್ಮಕ ಹೇಳಿಕೆ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮುಂದಿನ ಸುದ್ದಿ
Show comments