Select Your Language

Notifications

webdunia
webdunia
webdunia
webdunia

ಪಕ್ಷದ ಪುನಶ್ಚೇತನಕ್ಕೆ ಹೈಕಮಾಂಡ್‌ನಿಂದ ತಂಡ ರಚನೆಗೆ ಚಿಂತನೆ

ಪಕ್ಷದ ಪುನಶ್ಚೇತನಕ್ಕೆ ಹೈಕಮಾಂಡ್‌ನಿಂದ ತಂಡ ರಚನೆಗೆ ಚಿಂತನೆ
ನವದೆಹಲಿ , ಸೋಮವಾರ, 27 ಏಪ್ರಿಲ್ 2015 (21:33 IST)
ಸುದೀರ್ಘ‌ ರಜೆಯಿಂದ ಇತ್ತೀಚೆಗಷ್ಟೇ ಮರಳಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆಪ್ತರ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಹಿರಿತಲೆಗಳನ್ನು ಬದಲಿಸಿ ಯುವಕರಿಗೆ ಆದ್ಯತೆ ನೀಡಲಾಗಿದೆ. ಅಲ್ಲದೆ, ಕಾರ್ಪೊರೆಟ್‌ಕಚೇರಿ ಮಾದರಿಯಲ್ಲಿ ರಾಹುಲ್‌ ಗಾಂಧಿ ಅವರ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದೆ.

ದಶಕಗಳಿಂದ ರಾಹುಲ್‌ ಗಾಂಧಿ ಅವರಿಗೆ ಆಪ್ತ ಸಲಹೆಗಾರರಾಗಿದ್ದ ಕನಿಷ್ಕ ಸಿಂಗ್‌ ಅವರು ಈಗ ಪ್ರಿಯಾಂಕಾ ವಾದ್ರಾ ಅವರ ಕಚೇರಿಯನ್ನೂ ನೋಡಿಕೊಳ್ಳುತ್ತಿದ್ದಾರೆ.

ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಕುಶಾಲ್‌ ವಿದ್ಯಾರ್ಥಿ ಅವರು ರಾಹುಲ್‌ ಗಾಂಧಿ ಅವರ ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ರಾಹುಲ್‌ ಅವರ ಜತೆಗಿನ ಭೇಟಿಯನ್ನು ನಿಗದಿಪಡಿಸುವುದು. ರಾಹುಲ್‌ ಗಾಂಧಿ ಅವರ ಭಾಷಣವನ್ನು ಸಿದ್ಧಪಡಿಸುವ ಮಹತ್ವದ ಜವಾಬ್ದಾರಿಯನ್ನು ಕುಶಾಲ್‌ ನೋಡಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಮಾಧ್ಯಮದ ನಿರ್ವಹಣೆಯನ್ನೂ ನಿಭಾಯಿಸುತ್ತಿದ್ದಾರೆ.

ಆದರೆ, ಅಜಯ್‌ ಮಾಕನ್‌ ಅವರೇ ಪಕ್ಷದ ಅಧಿಕೃತ ಸಂವಹನಕಾರರಾಗಿ ಮುಂದುವರಿದಿದ್ದಾರೆ. ರಾಹುಲ್‌ಗಾಂಧಿ ತಮ್ಮ ಕಚೇರಿಗೆ ಹೊಸ ರೂಪ ನೀಡಿದ್ದು, ಕಾರ್ಪೊರೆಟ್‌ ಕಂಪನಿಗಳ ಮಾದರಿಯಲ್ಲಿ ನಿರ್ವಹಿಸುವಂತೆ ಮಾಡಿದ್ದಾರೆ. ಲಿಖೀತ ಮನವಿಯನ್ನು ಸಲ್ಲಿಸಿದವರಿಗೆ ಮಾತ್ರವೇ ರಾಹುಲ್‌ ಗಾಂಧಿ ಭೇಟಿಗೆ ದಿನಾಂಕವನ್ನು ನಿಗದಿಪಡಿಸಲಾಗುತ್ತಿದೆ.

ಅಲ್ಲದೆ, ಕೇವಲ 6 ರಿಂದ 7 ಸಿಬ್ಬಂದಿಗಳ ಚಿಕ್ಕ ಕಚೇರಿಯನ್ನು ರಾಹುಲ್‌ ಹೊಂದಿದ್ದಾರೆ. ಕಚೇಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ಯುವಕರೇ ಎನ್ನುವುದು ವಿಶೇಷ. ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಹೆಚ್ಚು ಸಕ್ರಿಯರಾಗಲು ಬಯಸಿದ್ದು, ಲೋಕಸಭೆಯಲ್ಲಿ ಸೂಕ್ತ ವಿಷಯಗಳ ಬಗ್ಗೆ ಟಿಪ್ಪಣಿ ಸಿದ್ಧಪಡಿಸುವ ಕೆಲಸವನ್ನು ಅವರ ತಂಡ ಮಾಡುತ್ತಿದೆ.

Share this Story:

Follow Webdunia kannada