Webdunia - Bharat's app for daily news and videos

Install App

ಚಾಯಿವಾಲಾ ದೇಶದ ಪ್ರಧಾನಿಯಾಗಿರುವುದು ಕಾಂಗ್ರೆಸ್ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ: ಬಿಜೆಪಿ

Webdunia
ಮಂಗಳವಾರ, 31 ಮೇ 2016 (20:42 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಶೆಹನ್‌ಶಾ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೆ ನೀಡಿರುವ ಬಗ್ಗೆ ವಾಗ್ದಾಳಿ ನಡೆಸಿದ ಬಿಜೆಪಿ, ಚಾಯಿವಾಲಾ ಪ್ರಧಾನಿಯಾಗಿರುವುದು ಸೋನಿಯಾ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗುಡುಗಿದೆ.
 
ಸೋನಿಯಾ ಗಾಂಧಿ ಶೆಹನ್‌ಶಾ ಅಂದರೆ ಅರ್ಥವೇನು ಎನ್ನುವ ಬಗ್ಗೆ ವಿವರಣೆ ನೀಡಬೇಕು. ಕಳೆದ ಒಂದು ದಶಕದಿಂದ ಅಧಿಕಾರ ನಡೆಸುವಾಗ ತೋರಿದಂತೆ ವರ್ತನೆಗೆ ಶೆಹನ್‌ಶಾ ಎನ್ನುತ್ತಾರೆಯೇ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದಾರೆ.
 
ಶೆಹನ್‌ಶಾ ಎಂದರೆ ದೇಶ ಮತ್ತು ಪಕ್ಷವನ್ನು ತನ್ನ ಸ್ವಂತದ್ದು ಎಂದು ಭಾವಿಸುವ ವ್ಯಕ್ತಿ. ಗಾಂಧಿ ಕುಟುಂಬವನ್ನು ಶೆಹನ್‌ಶಾ ಕುಟುಂಬ ಎಂದು ಕರೆಯಬಹುದು. ಕಳೆದ ಹಲವು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ದೇಶವನ್ನು ತನ್ನ ಸ್ವಂತ ದೇಶ ಎಂದು ಭಾವಿಸಿದೆ ಎಂದು ಕಿಡಿಕಾರಿದ್ದಾರೆ.
 
ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲು ಕಾರಣರಾದರು. ಅದು ಶೆಹನ್‌ಶಾ ವರ್ತನೆ ಅಲ್ಲವೇ? ಅದೊಂದು ರಾಜರ ಅಡಳಿತವಾಗಿತ್ತೆ ಎಂದು ಪ್ರಶ್ನಿಸಿದ್ದಾರೆ.  
 
ಪ್ರಧಾನಿ ನರೇಂದ್ರ ಮೋದಿ ಬಡಕುಟುಂಬದಿಂದ ಕಠಿಣ ಪರಿಶ್ರಮದಿಂದ ಜನತೆಯ ಆಶೀರ್ವಾದದಿಂದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಚಾಯಿವಾಲಾ ಪ್ರಧಾನಿ ಹುದ್ದೆಗೆ ಏರಿರುವುದು ಜನತೆಯ ಆಶೀರ್ವಾದದಿಂದ ಎನ್ನುವುದನ್ನು ಕಾಂಗ್ರೆಸ್ ನಾಯಕರು ಮರೆಯಬಾರದು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಕಿವಿಮಾತು ಹೇಳಿದ್ದಾರೆ. 
 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಇಂದಿನ ಅಡಿಕೆ, ಕಾಳುಮೆಣಸು ಮಾರುಕಟ್ಟೆ ದರ ಹೇಗಿದೆ ನೋಡಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸರ್ಕಾರಿ ನೌಕರರು, ಗುತ್ತಿಗೆದಾರರಿಗೆ ಗುಡ್ ನ್ಯೂಸ್: ಆರೋಗ್ಯ ಇಲಾಖೆಯಿಂದ ಭರ್ಜರಿ ಆಫರ್

ಪಾಕಿಸ್ತಾನವನ್ನು ನೈಸ್ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಗಿದೆ ಖತರ್ನಾಕ್ ಪ್ಲ್ಯಾನ್

Karnataka Weather: ಎರಡು ದಿನಗಳಿಗೆ ಹವಾಮಾನದಲ್ಲಿ ಆಗಲಿದೆ ಮಹತ್ವದ ಬದಲಾವಣೆ

ಮುಂದಿನ ಸುದ್ದಿ
Show comments