Webdunia - Bharat's app for daily news and videos

Install App

ಅಮಿರ್ ತಮ್ಮ ಬೆತ್ತಲೆ ಪೋಸ್ಟರ್ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತಿರುವ ಸಂಸದ

Webdunia
ಶನಿವಾರ, 9 ಆಗಸ್ಟ್ 2014 (18:26 IST)
ಮಿ.ಪರ್ಫೆಕ್ಟ್  ಅಮೀರ್ ಖಾನ್, ಈ ಹಿಂದೆ ತಮ್ಮ ನವೀನ ರೀತಿಯ ಚಿತ್ರ ಪ್ರಚಾರ ಐಡಿಯಾಸ್ ಮತ್ತು ತಂತ್ರಗಳಿಂದ ಎಲ್ಲರನ್ನು  ಪ್ರಭಾವಿತಗೊಳಿಸಿರಬಹುದು, ಆದರೆ ಈ ಬಾರಿ ಪೀಕೆ ಎಂಬ ಚಿತ್ರದ ಪ್ರಚಾರಕ್ಕಾಗಿ ಬೆತ್ತಲೆಯಾಗುವುದರ ಮೂಲಕ ಅವರು ಒಂದರ ಹಿಂದೆ ಒಂದು ವಿವಾದಗಳನ್ನು ಎದುರಿಸುವಂತಾಗಿದೆ. 

ಒಂದು ಹಳೆಯ ಟೇಪರಿಕಾರ್ಡರ್ ಮುಂದಿಟ್ಟುಕೊಂಡು  ಬೆತ್ತಲೆ ಪೋಸ್ ನೀಡಿದ ಅವರ ವಿರುದ್ಧ ಪ್ರತಿಭಟಿಸಲು ಸಾರ್ವಜನಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ತಮ್ಮನ್ನು ತಾವು ತಡೆಯದಾದರು. ಅವರ ಮೇಲೆ ಕೇಸ್ ಕೂಡ ದಾಖಲಾಯಿತು. ಈಗ ಕಾಂಗ್ರೆಸ್ ಪಕ್ಷದ ವಿಲೆ  ಪರ್ಲೆ ಸಂಸದ  ಕೃಷ್ಣ ಹೆಗ್ಡೆ  ಅಮಿರ್, ತಮ್ಮ ಅಭಿಮಾನಿಗಳಿಗೆ ಕಹಿ ಎನಿಸುತ್ತಿರುವ ಈ ಪೋಸ್ಟರ್ ತೆಗೆದು ಹಾಕುವಂತೆ  ಹೇಳುತ್ತಿದ್ದಾರೆ. 
 
 ಈ ಪೋಸ್ಟರ್  ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಇದು ಅನೇಕ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಅಮಿರ್ ಅವರ ಕಟ್ ಔಟ್  ಒಂದಕ್ಕೆ ಬಟ್ಟೆ ತೊಡಿಸುವ ಮೂಲಕ  ನಾವು ಅವರ ಆ ಕೆಟ್ಟ ಭಂಗಿಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ.  ಸಾಮಾಜಿಕ ಸಂವೇದನೆಗಳಿಗೆ ಧಕ್ಕೆ ತರುತ್ತಿರುವ ಈ ಪೋಸ್ಟರ್‌ನ್ನು  ಅಮಿರ್ ಹಿಂದಕ್ಕೆ ಪಡೆಯ ಬೇಕು  ಎಂದು ಮಾಧ್ಯಮಗಳ ಮೂಲಕ ನಾನು ಕೇಳಿಕೊಳ್ಳುತ್ತೇನೆ ಎಂದು ಸಂಸದರು ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ