Select Your Language

Notifications

webdunia
webdunia
webdunia
webdunia

ಮನೆಗೆಲಸದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ

ಮನೆಗೆಲಸದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ
ತೇಜ್‌ಪುರ , ಭಾನುವಾರ, 26 ಅಕ್ಟೋಬರ್ 2014 (13:24 IST)
ಅಸ್ಸಾಂ: ಸ್ಥಳೀಯ ಕಾಂಗ್ರೆಸ್‌ ನಾಯಕಿಯಾಗಿರುವ ತಾಯಿ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿರುವ ಅಪ್ಪನ 30 ವರ್ಷ ಪ್ರಾಯದ ಪುತ್ರ ತನ್ನ ಮನೆಗೆಲಸದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ತಲೆ ಮರೆಸಿಕೊಂಡಿರುವ ಘಟನೆ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ತೇಜ್‌ಪುರಿಂದ ವರದಿಯಾಗಿದೆ. 
 
ಅತ್ಯಾಚಾರಿ ಪುತ್ರ ಮಹಾಶಯ ಭಾಸ್ಕರನಾಥ ಬಸ್ಸೇರಿಯಾ ವಿರುದ್ಧ ತೇಜ್‌ಪುರ ಸದರ್‌ ಪೊಲೀಸ್‌ ಠಾಣೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ರೇಪ್‌ ಎಸಗಿದ ಆರೋಪದ ಮೇಲೆ ಎಫ್ ಐ ಆರ್‌ ದಾಖಲಾಗಿದೆ.
 
ಆರೋಪಿ ಭಾಸ್ಕರನಾಥನು ತನ್ನ ಮೇಲೆ ಕಳೆದೆರಡು ದಿನಗಳಿಂದ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯು ಪೊಲೀಸರಿಗೆ ದೂರು ನೀಡಿದ್ದು ಆ ಪ್ರಕಾರ ತನಿಖೆ ಕೈಗೊಂಡಿರುವ ಪೊಲೀಸರೀಗ ತಲೆಮರೆಸಿಕೊಂಡಿರುವ ಪ್ರಭಾವೀ ಅತ್ಯಾಚಾರಿಯ ಶೋಧದಲ್ಲಿದ್ದಾರೆ. ವಿಶೇಷವೆಂದರೆ ಸ್ಥಳೀಯ ಕಾಂಗ್ರೆಸ್‌ ನಾಯಕಿ ತಾಯಿಯ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್‌ ಅಪ್ಪನ ಈ ಪುತ್ರನ ವಿರುದ್ಧ ಈ ಹಿಂದೆಯ ಕಾರು ಕಳ್ಳತನ, ದರೋಡೆ ಮುಂತಾದ ಕ್ರಿಮಿನಲ್‌ ಕೃತ್ಯಗಳಿಗೆ ಸಂಬಂಧಿಸಿ ಕೇಸುಗಳು ದಾಖಲಾಗಿದ್ದು ಅವು ತನಿಖೆಯಲ್ಲಿವೆ.

Share this Story:

Follow Webdunia kannada