Select Your Language

Notifications

webdunia
webdunia
webdunia
webdunia

ಚತ್ತೀಸ್‌ಗಡ್ ಸಿಎಂ ರಮಣ್‌ಸಿಂಗ್‌ರನ್ನು ಸೋಲಿಸಲು ಹೊಸ ಪಕ್ಷ ರಚನೆ: ಅಜಿತ್ ಜೋಗಿ

ಚತ್ತೀಸ್‌ಗಡ್ ಸಿಎಂ ರಮಣ್‌ಸಿಂಗ್‌ರನ್ನು ಸೋಲಿಸಲು ಹೊಸ ಪಕ್ಷ ರಚನೆ: ಅಜಿತ್ ಜೋಗಿ
ಚತ್ತೀಸ್‌ಗಢ್ , ಗುರುವಾರ, 2 ಜೂನ್ 2016 (16:11 IST)
ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಹೊಸ ಪಕ್ಷ ಸ್ಥಾಪಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ರಮಣ್ ಸಿಂಗ್ ಅವರನ್ನು ಸೋಲಿಸುವುದು ನಮ್ಮ ಏಕೈಕ ಗುರಿಯಾಗಿದೆ ಎಂದು ಬಹಿರಂಗ ಸವಾಲ್ ಹಾಕಿದ್ದಾರೆ.  
 
ಹೈಕಮಾಂಡ್‌ಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ, ಹೊಸ ಪಕ್ಷ ಸ್ಥಾಪಿಸಿ ರಮಣ್ ಸಿಂಗ್ ಅವರನ್ನು ಸೋಲಿಸುತ್ತೇವೆ ಎಂದು ತಿಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷ ಮತ್ತು ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟಿಸಿದೆ.
 
ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ನಾಯಕರ ವಿರುದ್ಧವೇ ಹೇಳಿಕೆ ನೀಡುವುದನ್ನು ಪಕ್ಷದ ಹೈಕಮಾಂಡ್ ಸಹಿಸುವುದಿಲ್ಲ . ಅವರು ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಚತ್ತೀಸ್‌ಗಢ್‌ನ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಶೈಲೇಶ್ ನಿತಿನ್ ತ್ರೀವೇದಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಾದ್ರಿ ಪ್ರಕರಣ: ಉ.ಪ್ರ ಸರ್ಕಾರ, ಶಾರುಖ್, ಅಮೀರ್ ಕ್ಷಮೆಗೆ ಆಗ್ರಹಿಸಿದ ವಿಹೆಚ್‌ಪಿ