ನಗರದಲ್ಲಿ ನಾಳೆಯಿಂದ ಆರಂಭವಾಗಲಿರುವ ಐದು ರಾಷ್ಟ್ರಗಳ ಶೃಂಗಸಭೆಗೆ ಕಮಲದಂತಿರುವ ಲೋಗೋ ಬಳಸಿದ್ದರಿಂದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಅಪಸ್ವರ ಹೊರಡಿಸಿವೆ.
ಗೋವಾ, ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್ ಮತ್ತು ಮಣಿಪುರ್ ರಾಜ್ಯಗಳಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಇಂತಹ ಸಂದರ್ಭದಲ್ಲಿ ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷವೊಂದರ ಚುನಾವಣೆ ಚಿಹ್ನೆಯನ್ನು ಬ್ರಿಕ್ಸ್ ಶೃಂಗಸಭೆಗೆ ಬಳಸಿರುವ ಹಿಂದೆ ಕುತಂತ್ರವಿದೆ ಎಂದು ಕಾಂಗ್ರೆಸ್ ಸಂಸದ ಶಾಂತಾರಾಮ್ ನಾಯಕ್ ಆರೋಪಿಸಿದ್ದಾರೆ.
ಬಿಜೆಪಿ ಚುನಾವಣೆ ಚಿಹ್ನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ಪಕ್ಷದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಚುನಾವಣೆ ಆಯೋಗಕ್ಕೆ ನಾಯಕ್ ದೂರು ನೀಡಿದ್ದಾರೆ.
ಏತನ್ಮಧ್ಯೆ, ಆಪ್ ವಕ್ತಾರ ರೂಪೇಶ್ ಶಿಂಕ್ರೆ ಮಾತನಾಡಿ, ಹಿಂದೆ ಯಾವುದೇ ದೇಶದಲ್ಲಿ ಬ್ರಿಕ್ಸ್ ಸಮಾವೇಶಗಳು ನಡೆದಾಗ ಆಯಾ ಸ್ಥಳದ ಹೆಸರು ನಮೂದಿಸಲಾಗಿತ್ತು. ಇದೀಗ ಬ್ರಿಕ್ಸ್ ಲೋಗೋದಲ್ಲಿ ಯಾಕೆ ಗೋವಾ ಹೆಸರು ನಮೂದಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ