Select Your Language

Notifications

webdunia
webdunia
webdunia
webdunia

ಮೋದಿ ಸರಕಾರದ 2 ವರ್ಷ ಸಂಭ್ರಮಾಚರಣೆ: ವೈಫಲ್ಯಗಳ ಪುಸ್ತಕ ಬಿಡುಗಡೆ ಮಾಡಿದ ಕಾಂಗ್ರೆಸ್

ಮೋದಿ ಸರಕಾರದ 2 ವರ್ಷ ಸಂಭ್ರಮಾಚರಣೆ: ವೈಫಲ್ಯಗಳ ಪುಸ್ತಕ ಬಿಡುಗಡೆ ಮಾಡಿದ ಕಾಂಗ್ರೆಸ್
ನವದೆಹಲಿ , ಶನಿವಾರ, 28 ಮೇ 2016 (17:07 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಎರಡು ವರ್ಷಗಳ ಅಧಿಕಾರವಧಿ ಪೂರ್ಣಗೊಳಿಸಿದ ಸಂಭ್ರಮವನ್ನು ಬಿಜೆಪಿ ಆಚರಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷ ಮೋದಿ ಸರಕಾರದ ವೈಫಲ್ಯಗಳ ಪುಸ್ತಕವನ್ನು ಬಿಡುಗಡೆ ಮಾಡಿದೆ.
ಮೋದಿ ಸರಕಾರದ ಎರಡು ವರ್ಷಗಳ ವಿಫಲ ಭರವಸೆಗಳು ಮತ್ತು ಸುಳ್ಳಿನ ಕಂತೆಗಳು ಎನ್ನುವ ಶೀರ್ಷಿಕೆಯಿರುವ ಪುಸ್ತಕವನ್ನು ಕಾಂಗ್ರೆಸ್ ಮುಖಂಡ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಇಂದು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.
 
ಬಿಜೆಪಿ, ಮೋದಿ ಸರಕಾರದ ಎರಡು ವರ್ಷಗಳ ಸಂಭ್ರಮದಲ್ಲಿದೆ. ಆದರೆ, ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ಮೋದಿ ಸರಕಾರವನ್ನು ಟೀಕಿಸುತ್ತಿದೆ. ಗಮನಾರ್ಹ ವಿಷಯವೆಂದರೆ ಮೋದಿ ಸರಕಾರದ ಸಂಭ್ರಮಾಚರಣೆಯಲ್ಲಿ ಜನತೆ ಪಾಲ್ಗೊಳ್ಳದಿರುವುದು ಎಂದು ಲೇವಡಿ ಮಾಡಿದ್ದಾರೆ.
 
ಮೋದಿ ಸರಕಾರದ ಎರಡು ವರ್ಷಗಳ ದುರಾಡಳಿತದಿಂದಾಗಿ ದೇಶದ ಜನತೆ ಮಂಕಾಗಿ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಎಂದರು. 
 
ಮುಂಬರುವ 2017-18ರ ಸಾಲಿನಲ್ಲಿ ಶೇ.3 ರಷ್ಟು ವಿತ್ತಿಯ ಕೊರತೆಯನ್ನು ನೀಗಿಸಲು ಸರಕಾರ ಬದ್ಧವಾಗಿದೆ ಎನ್ನುವ ಕೇಂದ್ರ ಸರಕಾರದ ನಿಲುವಿಗೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ವಾಗ್ದಾಳಿ ನಡೆಸಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರು ಪ್ರತಿಭಟನೆ ಕೈ ಬಿಟ್ಟು ಚರ್ಚೆಗೆ ಬರಲಿ: ಡಾ.ಜಿ.ಪರಮೇಶ್ವರ್