Webdunia - Bharat's app for daily news and videos

Install App

ಬಿಜೆಪಿ ಕಚೇರಿಯ ಕಸಗುಡಿಸುವವನ ಪುತ್ರಿಯ ವಿವಾಹಕ್ಕೆ ಹಾಜರಾದ ಸಿಎಂ ರಘುಬೀರ್ ದಾಸ್

Webdunia
ಶನಿವಾರ, 28 ನವೆಂಬರ್ 2015 (15:38 IST)
ಬಿಜೆಪಿ ಕಚೇರಿಯಲ್ಲಿ ಕಸಗುಡಿಸುವ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬನ ಪುತ್ರಿಯ ವಿವಾಹಕ್ಕೆ ಮುಖ್ಯಮಂತ್ರಿ ರಘುಬರ್ ದಾಸ್ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.
 
ಕಸಗುಡಿಸುವ ಫೌಲೊ ಖಾಲ್ಖೋ, ತನ್ನ ಪುತ್ರಿಯ ವಿವಾಹಕ್ಕೆ ಮುಖ್ಯಮಂತ್ರಿ ರಘುಬರ್ ದಾಸ್ ಆಗಮಿಸಿರುವುದು ಸಂತಸ ತಂದಿದೆ ಎಂದು ಹೇಳಿದ್ದಾನೆ. ಮುಖ್ಯಮಂತ್ರಿ ರಘುಬರ್ ದಾಸ್ ನವದಂಪತಿಗಳಿಗೆ ಆಶೀರ್ವದಿಸಿ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುವಂತೆ ಹಾರೈಸಿದ್ದಾರೆ.
 
ಆಸಕ್ತಿಕರ ವಿಷಯವೆಂದರೆ ಖಾಲ್ಖೋ ಪುತ್ರಿ ಪ್ರೀತಿ, ತನ್ನ ಅತ್ತೆಯ ಮಗ, ಬಿಜೆಪಿ ಕಾರ್ಯಕರ್ತ ಸುಮನ್ ಕುಜುರ್ ಎಂಬಾತನನ್ನು ವಿವಾಹವಾಗಿದ್ದಾಳೆ.
 
ಮುಖ್ಯಮಂತ್ರಿ ರಘುಬರ್ ದಾಸ್ ಸಮ್ಮುಖದಲ್ಲಿ ಮಾತನಾಡಿದ ಪ್ರೀತಿ, ನನ್ನ ಮದುವೆಗೆ ಮುಖ್ಯಮಂತ್ರಿಗಳು ಆಗಮಿಸಿ ವಿಶೇಷತೆ ತಂದಿದ್ದಾರೆ. ಮುಖ್ಯಮಂತ್ರಿಗಳ ಆಶೀರ್ವಾದದಿಂದ ಹೊಸ ವೈವಾಹಿಕ ಜೀವನ ಆರಂಭವಾಗಿರುವುದಕ್ಕೆ ಸಂತಸ ತಂದಿದೆ ಎಂದಿದ್ದಾಳೆ. 
 
ಮುಖ್ಯಮಂತ್ರಿ ದಾಸ್ ಮಾತನಾಡಿ, ಬಿಜೆಪಿ ಒಂದು ಕುಟುಂಬದಂತೆ. ಮನೆಯ ಯಜಮಾನ ಪುತ್ರಿಯ ವಿವಾಹಕ್ಕೆ ತೆರಳದಿರಲು ಹೇಗೆ ಸಾಧ್ಯ ಎಂದು ಹೇಳಿ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments