Webdunia - Bharat's app for daily news and videos

Install App

ಅತ್ಯಾಚಾರ ಆರೋಪಿ ಆಸಾರಾಮ್ ಬಾಪು ಮಹಾನ್ ಸಂತನಂತೆ!

Webdunia
ಭಾನುವಾರ, 2 ಆಗಸ್ಟ್ 2015 (14:40 IST)
ಅತ್ಯಾಚಾರದ ಆರೋಪಿ ಮಹಾನ್ ಸಂತನಂತೆ! ಹೀಗೆಂದು ರಾಜಸ್ಥಾನದ ಶಾಲೆಗಳಲ್ಲಿ ಓದುತ್ತಿರುವ ಪುಟ್ಟ ಪುಟ್ಟ ಮಕ್ಕಳಿಗೆ ಬೋಧಿಸಲಾಗುತ್ತಿದೆಯಂತೆ. 

ರಾಷ್ಟ್ರೀಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ರಾಜಸ್ತಾನದ ಮೂರನೇ ತರಗತಿ ಪಠ್ಯಪುಸ್ತಕ ನಯಾ ಉಜಾಲಾ( ಹೊಸ ಬೆಳಕು)ದ 40 ನೇ ಪುಟದಲ್ಲಿ ಈ ಆವಾಂತರ ಕಂಡುಬಂದಿದ್ದು ಅಸಾರಾಮ್ ಬಾಪು ದೇಶದ ಶ್ರೇಷ್ಠ ಸನ್ಯಾಸಿಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.  ಗುರುನಾಕ್, ಮದರ್ ಥೆರೇಸಾ, ರಾಮಕೃಷ್ಣ ಪರಮಹಂಸರಂತಹ ಮಹಾತ್ಮರ ಹೆಸರಿನ ಜತೆಗೆ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಹೆಸರು ಕೂಡ ಇದೆ.
 
 ರಾಜಸ್ತಾನದ ಸುಮಾರು 80 ಶಾಲೆಗಳಲ್ಲಿ ಈ ಪಠ್ಯಪುಸ್ತಕಗಳನ್ನು ಬೋಧಿಸಲಾಗುತ್ತಿದೆ.
 
ಆದರೆ ಜೋಧಪುರದ ಶಿಕ್ಷಣ ಇಲಾಖೆ ಈ ಕುರಿತು ತಮಗೆ ಅರಿವೇ ಇಲ್ಲ ಎಂದು ಬೇಜವಾಬ್ದಾರಿತನ ಪ್ರದರ್ಶಿಸಿದೆ. 
 
ಆಸಾರಾಂ ಬಾಪು ಅವರು ಗುಜರಾತ್‌ನಲ್ಲಿ ಆಶ್ರಮ ಹೊಂದಿದ್ದು, ದೇಶಾದ್ಯಂತ ಅಪಾರ ಭಕ್ತಗಣವನ್ನು ಹೊಂದಿದ್ದಾರೆ. ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಅವರೀಗ ಜೋಧಪುರ್ ಜೈಲಿನಲ್ಲಿದ್ದಾರೆ
 
ಅವರ ಪುತ್ರ ನಾರಾಯಣ್ ಸಾಯಿ ಕೂಡ ಅತ್ಯಾಚಾರದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments