Select Your Language

Notifications

webdunia
webdunia
webdunia
webdunia

8ನೇ ತರಗತಿ ವಿದ್ಯಾರ್ಥಿಯಿಂದ 3ನೇ ತರಗತಿಯ ವಿದ್ಯಾರ್ಥಿಯ ಹತ್ಯೆ

8ನೇ ತರಗತಿ ವಿದ್ಯಾರ್ಥಿಯಿಂದ 3ನೇ ತರಗತಿಯ ವಿದ್ಯಾರ್ಥಿಯ ಹತ್ಯೆ
ಲಖನೌ , ಸೋಮವಾರ, 30 ಮಾರ್ಚ್ 2015 (18:49 IST)
ಕೇವಲ 230 ರೂಪಾಯಿಗಾಗಿ 3 ನೇ ತರಗತಿಯಲ್ಲಿ ಓದುತ್ತಿರುವ ಬಾಲಕನನ್ನು 8ನೇ ತರಗತಿಯಲ್ಲಿ ಓದುತ್ತಿರುವ ಹುಡುಗ ಮನಬಂದಂತೆ ಥಳಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಲಖನೌನ ಹೊರವಲಯದಲ್ಲಿ ನಡೆದಿದೆ

12 ವರ್ಷದ ಅಂಕಿತ್ ಕುಮಾರ್ ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದ ಮತ್ತು ದೇಹದ ತುಂಬ ಗಾಯಗಳಾಗಿದ್ದ ಆತನ ಮೃತ ದೇಹ ನಿವಾಸದಿಂದ 500 ಮೀಟರ್ ದೂರದಲ್ಲಿ  ಪತ್ತೆಯಾಗಿತ್ತು. ಅಂಕಿತ್ ಹತ್ತಿರದ ಖಾಸಗಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದೆ. 
 
ಆರೋಪಿ ಮೃತನ ನೆರಮನೆಯವನಾಗಿದ್ದು ಮೆಕಾನಿಕ್ ಮಗನಾಗಿರುವ ಆತ ಅದೇ ಶಾಲೆಯಲ್ಲಿ ಓದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 
 
ವಿಚಾರಣೆ ಸಂದರ್ಭದಲ್ಲಿ ತನ್ನ ಮಗ ತಪ್ಪು ಮಾಡಿರುವುದನ್ನು ಒಪ್ಪಿಕೊಂಡ ಮೆಕಾನಿಕ್ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ವಕ್ತಾರ ಅಲೋಕ್ ಪಾಠಕ್ ತಿಳಿಸಿದ್ದಾರೆ. ಆರೋಪಿ ಹುಡುಗ ಅಂಕಿತ್‌ನಿಂದ 230 ರೂಪಾಯಿಗಳನ್ನು ಪಡೆದುಕೊಂಡಿದ್ದ. ಅಂಕಿತ್ ಅದನ್ನು ಹಿಂತಿರುಗಿಸುವಂತೆ ಕೇಳಿಕೊಂಡಾಗ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿ  ಆರೋಪಿ ಹುಡುಗ ಅಂಕಿತ್ ಮೇಲೆ ಇಟ್ಟಿಗೆಯಿಂದ ದಾಳಿ ನಡೆಸಿದ್ದಾನೆ. ಆತನ  ತಲೆ ಮತ್ತು ಮುಖದ ಮೇಲೆ ನಿರಂತರವಾಗಿ ಜಜ್ಜಿದ ಪರಿಣಾಮ ಅಂಕಿತ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ. 

Share this Story:

Follow Webdunia kannada