Webdunia - Bharat's app for daily news and videos

Install App

10 ನೇ ತರಗತಿಯ ಈ ಬಾಲಕರು ಮಾಡಿದರು ಬೆಚ್ಚಿ ಬೀಳಿಸುವ ಕೃತ್ಯ

Webdunia
ಬುಧವಾರ, 27 ಮೇ 2015 (10:55 IST)
10 ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಬಾಲಕರು ಮಾಡಿದ ಕೃತ್ಯದ ಬಗ್ಗೆ ತಿಳಿದರೆ ನೀವು ಸಹ ದಂಗಾಗುತ್ತೀರಾ. ಸೋಮವಾರ ಸಂಜೆ ಈ ಅಪ್ರಾಪ್ತರು ತಮ್ಮ ಸ್ನೇಹಿತನನ್ನೇ ಅಪಹರಣ ಮಾಡಿದರು ಮತ್ತು ಆತನ ಕುಟುಂಬದವರ ಬಳಿ 5 ಲಕ್ಷದ ಬೇಡಿಕೆಯನ್ನಿಟ್ಟರು. ಆದರೆ ತಮ್ಮ ಕಾರ್ಯದಲ್ಲವರು ಸಫಲರಾಗಲಿಲ್ಲ.
ನಗರದ ಮೊಹಲ್ಲಾ ಸ್ವಾಮಿವಾಡಾ ನಿವಾಸಿಯಾದ ಅಪಹೃತ ಬಾಲಕ ಕಿಶೋರನ ತಂದೆ ಚಿನ್ನದ ಅಂಗಡಿಯನ್ನಿಟ್ಟುಕೊಂಡಿದ್ದಾರೆ. ಶನಿವಾರ ಸಂಜೆ ಆತನ ಮನೆಗೆ ಬಂದ ಸ್ನೇಹಿತರು ಕಂಪ್ಯೂಟರ್ ದುರಸ್ತಿ ಮಾಡಲು ಸಹಾಯ ಮಾಡು ಎಂಬ ನೆಪ ಹೇಳಿ ಆತನನ್ನು ತಮ್ಮ ಜತೆ ಕರೆದುಕೊಂಡು ಹೋದರು. ಒಂದೇ ದ್ವಿಚಕ್ರ ವಾಹನದಲ್ಲಿ ಓಡಾಡುತ್ತ ಆಶ್ರಮವೊಂದರ ಬಳಿ ತಲುಪಿದ ಅವರು ಆಶ್ರಮದಲ್ಲಿನ ಖಾಲಿ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಸ್ನೇಹಿತನ ಬಾಯಿಗೆ ರುಮಾಲು ತುರುಕಿ, ಕೈ ಕಾಲು ಕಟ್ಟಿದರು. ದೊಣ್ಣೆಯಿಂದ ಥಳಿಸುತ್ತ ಆತನ ತಂದೆಗೆ ಫೋನ್ ಕರೆ ಮಾಡಿ 5 ಲಕ್ಷ ರೂಪಾಯಿ ನೀಡಿ ಇಲ್ಲದಿದ್ದರೆ ನಿಮ್ಮ ಮಗನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಒಡ್ಡಿದರು. 
 
ಅಪಹೃತ ಕಿಶೋರ್‌ನನ್ನು ಆಶ್ರಮವೊಂದರ ಖಾಲಿ ಟ್ಯಾಂಕ್ ಒಂದರಲ್ಲಿ ಅಡಗಿಸಲು ಅವರು ಪ್ರಯತ್ನಿದರು. ಆ ಸಂದರ್ಭದಲ್ಲಿ ರುಮಾಲು ಬಾಯಿಯಿಂದ ಹೊರಗೆ ಬಂದು ಆತ ಕಿರುಚಲು ಪ್ರಾರಂಭಿಸಿದ. 
 
ಆಶ್ರಮದ ಎರಡು ಕಾವಲುಗಾರರು ಆತನ ಕೂಗನ್ನು ಕೇಳಿ ಸಹಾಯಕ್ಕಾಗಿ ಓಡಿ ಬಂದರು. ಆದರೆ ಆ ಸಂದರ್ಭದಲ್ಲಿ ಆರೋಪಿ ಬಾಲಕರಿಬ್ಬರು ಪರಾರಿಯಾಗಿದ್ದರು. ಬಾಲಕರಿಬ್ಬರನ್ನು ಬಂಧಿಸಿದ ಪೊಲೀಸರು ಬಾಲ ನ್ಯಾಯ ಮಂಡಳಿಯಲ್ಲಿ ಅವರನ್ನು ಹಾಜರು ಪಡಿಸಿದರು. 
 
ಆರೋಪಿಗಳಲ್ಲಿ ಒಬ್ಬ ಅಮ್ಮನ ಬಂಗಾರದ ಚೈನ್ ತೊಟ್ಟುಕೊಂಡು ಶಾಲೆಗೆ ಬಂದಾಗ ಅದು ಕಳೆದು ಹೋಗಿತ್ತಂತೆ. ಜತೆಗೆ ಸ್ನೇಹಿತನೊಬ್ಬನ ಮೊಬೈಲ್ ಸಹ ಇತನ ಬಳಿ ಇದ್ದಾಗಲೇ ಕಾಣೆಯಾಗಿತ್ತಂತೆ. ಅವೆರಡನ್ನು ಮರಳಿಸಲು ಬಾಲಕರು ಈ ಯೋಜನೆಯನ್ನು ರೂಪಿಸಿದ್ದರು ಎಂಬುದು ವಿಚಾರಣೆ ವೇಳೆ ಬಹಿರಂಗ ಗೊಂಡಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments