ಆರು ಜನ ಕಾಮುಕರ ತಂಡವೊಂದು ಹತ್ತನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ ನಂತರ ಆಕೆಯನ್ನು ಚಲಿಸುತ್ತಿರುವ ರೈಲಿನ ಮುಂದೆ ಬಿಸಾಕಿದ ಹೇಯ ಘಟನೆ ವರದಿಯಾಗಿದೆ.
ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು ವೈದ್ಯರ ತಂಡ ನಿರಂತರವಾಗಿ ನಿಗಾವಹಿಸುತ್ತಿದೆ ಎಂದು ಪಾಟ್ನಾ ಮೆಡಿಕಲ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಕಾಮುಕರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಾಲಕಿಯ ಪೋಷಕರಿಗೆ ಭರವಸೆ ನೀಡಿದ್ದಾರೆ.
ಲಖಿಸರೈ ಜಿಲ್ಲೆಯ ಲಖೋಚಾಕ್ ಗ್ರಾಮದ ನಿವಾಸಿಯಾದ ಬಾಲಕಿ. ರಾತ್ರಿ ಪ್ರಕೃತಿಯ ಕರೆಗಾಗಿ ಮನೆಯಿಂದ ಹೊರಬಂದಾಗ ಮನೆಯ ಹೊರಗಡೆ ಕಾಯುತ್ತಿದ್ದ ಆರು ಮಂದಿ ಕಾಮುಕರು ಆಕೆಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರು ಮಂದಿಯಲ್ಲಿ ಇಬ್ಬರಾದ ಸಂತೋಶ್ ಕುಮಾರ್ ಮತ್ತು ಮೃತ್ಯುಂಜಯ್ ಕುಮಾರ್ ನನಗೆ ಪರಿಚಿತರಾಗಿದ್ದು, ಅವರು ಅತ್ಯಾಚಾರವೆಸಗಿದ ಕೂಡಲೇ ನಾನು ಪ್ರಜ್ಞೆ ಕಳೆದುಕೊಂಡಿದ್ದೆ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಈಗಾಗಲೇ ಸಂತೋಷ್ ಕುಮಾರ್ ಎನ್ನುವ ಆರೋಪಿಯನ್ನು ಬಂಧಿಸಲಾಗಿದೆ. ಆದಾಗ್ಯೂ ಇದೊಂದು ಗ್ಯಾಂಗ್‌ರೇಪ್ ಎಂದು ನನಗನ್ನಿಸುವುದಿಲ್ಲ. ಬಾಲಕಿ ಸಂತೋಷ್‌ಕುಮಾರ್‌ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಆಕೆಯ ಮೇಲೆ ಗ್ಯಾಂಗ್‌ರೇಪ್ ಏಕೆ ನಡೆಯಿತು ಎನ್ನುವುದು ತನಿಖೆಯ ನಂತರ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.
ಲಖಿಸರಾಯ್ ಡಿಎಸ್ಪಿ ಪಂಕಜ್ ಕುಮಾರ್ ಅವರ ನೇತೃತ್ವದ ತಂಡವನ್ನು ತನಿಖೆಗಾಗಿ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.