Webdunia - Bharat's app for daily news and videos

Install App

ಯುವತಿಯಿಂದ ಯುವಕನಿಗೆ ಕಿರುಕುಳ: ಕ್ರೈಮ್ ಬ್ರಾಂಚ್‌ಗೆ ಯುವಕನ ದೂರು

Webdunia
ಬುಧವಾರ, 22 ಅಕ್ಟೋಬರ್ 2014 (19:02 IST)
27 ವರ್ಷದ ಅರಿಹಂತ್ ಎಂಬ ಯುವಕ ತನಗೆ ಸಾಮಾಜಿಕ ತಾಣದಲ್ಲಿ ಯುವತಿಯೊಬ್ಬಳು ಕಿರುಕುಳ ನೀಡುತ್ತಿದ್ದಾಳೆ ಎಂದು ಸೈಬರ್ ಸೆಲ್  ಅಧಿಕಾರಿಗಳಿಗೆ ದೂರು ನೀಡಿದಾಗ ಅಚ್ಚರಿಗೊಂಡಿದ್ದರು. ಆನಂದನಗರದಲ್ಲಿ ವಾಸವರಿರುವ ಅರಿಹಂತ್ ಎಂಬ ಯುವ ಉದ್ಯಮಿ ಕ್ರೈಮ್ ಬ್ರಾಂಚ್‌ಗೆ ನೀಡಿದ ಲಿಖಿತ ದೂರಿನಲ್ಲಿ, ಸಾಮಾಜಿಕ ಜಾಲ ತಾಣದಲ್ಲಿ ಯುವತಿ ತನ್ನ ಜೊತೆ ಸಂಪರ್ಕ ಸಾಧಿಸಿದಳು ಎಂದು ತಿಳಿಸಿದ್ದಾನೆ.ಆರಂಭದಲ್ಲಿ ಯುವತಿಯ ಜೊತೆ ಚಾಟ್ ಮಾಡುವುದು ಒಂದು ವರ್ಷದವರೆಗೆ ಮುಂದುವರೆದು ಖುದ್ದಾಗಿ ಭೇಟಿಯನ್ನೂ ಮಾಡಿದ್ದರು.

ನಂತರ ಯುವತಿ ಅವನಿಗೆ ದುಬಾರಿ ಉಡುಗೋರೆಗಳನ್ನು ನೀಡುವಂತೆ ಒತ್ತಾಯಿಸಿದಳು. ಇದನ್ನು ಗಮನಿಸಿದ ಅರಿಹಂತ್  ಅವಳಿಂದ ದೂರವಾಗತೊಡಗಿದ ಮತ್ತು ಅವಳ ಸಂದೇಶಗಳನ್ನು ಕೂಡ ಕಡೆಗಣಿಸತೊಡಗಿದ. ಆದರೆ ಯುವತಿ ಪ್ರಿಯಾಂಕ ಇದಕ್ಕೆ ಜಗ್ಗದೇ ಅರಿಹಂತ್ ಮತ್ತು ಅವನ ತಾಯಿ ಮೊಬೈಲ್  ನಂಬರುಗಳನ್ನು ಪಡೆದು ಅವರಿಗೆ ಕರೆಗಳನ್ನು ಮಾಡತೊಡಗಿ ಕಿರುಕುಳ ನೀಡತೊಡಗಿದಳು.. ಇದು 2 ವರ್ಷಗಳವರೆಗೆ ಮುಂದುವರೆಯಿತು.

ಅರಿಹಂತ್ ನಂತರ ನಮ್ಮನ್ನು ಸಂಪರ್ಕಿಸಿದಾಗ ನಾವು ಅವನ ಹೇಳಿಕೆಗಳನ್ನು ದಾಖಲಿಸಿ ಅರಿಹಂತ್ ಸಾಮಾಜಿಕ ತಾಣದ ಐಡಿಗೆ ಸಂದೇಶಗಳನ್ನು ಪೋಸ್ಟ್ ಮಾಡಿದ ಉಪಕರಣದ ಐಪಿ ವಿಳಾಸವನ್ನು ಕೇಳಿದ್ದಾರೆ. ಯುವತಿ ಯುವಕನಿಗೆ  ಕಿರುಕುಳ ನೀಡಿದ ದೂರನ್ನು ಸ್ವೀಕರಿಸಿರುವುದು ಇದೇ ಮೊದಲ ಬಾರಿ. ನಾವು ಸ್ವೀಕರಿಸುವ ಅನೇಕ ದೂರುಗಳು ಪುರುಷರಿಂದ ಮಹಿಳೆಯರಿಗೆ,ಯುವತಿಯರಿಗೆ ಉಂಟಾಗುವ ಕಿರುಕುಳಕ್ಕೆ ಸಂಬಂಧಿಸಿದೆ ಎಂದು ಸೈಬರ್ ಸೆಲ್ ಅಧಿಕಾರಿಗಳು ಹೇಳಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments